ಬಸ್- ದ್ವಿಚಕ್ರ ವಾಹನದ ನಡುವೆ ಅಪಘಾತ; ಗಂಭೀರ ಗಾಯಗೊಂಡ ಮಹಿಳೆ

ಶೇರ್ ಮಾಡಿ

ಮಣಿಪಾಲ: ಇಲ್ಲಿನ ಟೈಗರ್ ಸರ್ಕಲ್ ಬಳಿ ಬಸ್ ಹಾಗು ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಉಡುಪಿಯಿಂದ ಪರ್ಕಳಕ್ಕೆ ತಂದೆ ಮಗಳಿದ್ದ ಮೊಪೆಡ್ ವಾಹನಕ್ಕೆ ಉಡುಪಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಟೈಗರ್ ಸರ್ಕಲ್ ಬಳಿ ಯು ಟರ್ನ್ ಹೊಡೆಯುತ್ತಿದ್ದ ವೇಳೆ ಢಿಕ್ಕಿ ಹೊಡೆದಿದೆ. ಮೊಪೆಡ್ ನಲ್ಲಿದ್ದ ಶ್ರಿದೇವಿ ಪ್ರಭು(42) ಎಂಬವರು ಗಂಭೀರ ಗಾಯಗೊಂಡಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ತಂದೆ ರಮಾಕಾಂತ ಪ್ರಭು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಸ್ಮರಣಶಕ್ತಿಯ ಪ್ರಾತ್ಯಕ್ಷಿಕೆಯನ್ನೂ ನಡೆಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.
ನಿರಂತ್ ಜೈನ್ ಸ್ವಾಗತಿಸಿದರು. ಕಿಶೋರ್ ಪಾಟೀಲ್ ವಂದಿಸಿದರು. ದುತಿಯಾ ನಿರೂಪಿಸಿದರು.

Leave a Reply

error: Content is protected !!