ಪತ್ರಕರ್ತ‌ ನಿಶಾಂತ್ ಬಿಲ್ಲಂಪದವು ಮೇಲಿನ ದೌರ್ಜನ್ಯ ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಖಂಡನೆ-ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಶೇರ್ ಮಾಡಿ

ಕಡಬ: ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿಯ ಪುತ್ತೂರು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಶಾಂತ್ ಬಿಲ್ಲಂಪದವು ಅವರ ಮೇಲೆ ಜುಲೈ 15ರಂದು ಪುತ್ತೂರಿನ ಬಪ್ಪಳಿಗೆಯಲ್ಲಿ ನಡೆದಿರುವ ದೌರ್ಜನ್ಯವನ್ನು ಕಡಬ ತಾಲೂಕು ಪತ್ರಕರ್ತರ ಸಂಘ ಖಂಡಿಸಿದೆ.
ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ನಿಶಾಂತ್ ಬಿಲ್ಲಂಪದವು ಅವರು ಕಾರ್ಯ ನಿರತರಾಗಿದ್ದ ವೇಳೆ ಅಮಾನವೀಯವಾಗಿ ವರ್ತಿಸಿ ಅವರಿಗೆ ಹಲ್ಲೆ ನಡೆಸಿ ಮೊಬೈಲ್ ಫೋನ್‌ ಹುಡಿ ಮಾಡಿ ಜೀವ ಬೆದರಿಕೆ‌ ಒಡ್ಡಿರುವ ಘಟನೆಯನ್ನು‌ ಕಡಬ ತಾಲೂಕು ಪತ್ರಕರ್ತರ ಸಂಘ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು‌ ಜರುಗಿಸಬೇಕು ಎಂದು‌ ಒತ್ತಾಯಿಸುತ್ತದೆ.
ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ‌ ಜರಗಿಸದೇ ಇದ್ದಲ್ಲಿ‌ ಎಲ್ಲಾ ಪತ್ರಕರ್ತರ ಜತೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು‌ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಹಾಗೂ ಕಾರ್ಯದರ್ಶಿ ವಿಜಯಕುಮಾರ್ ಪೆರ್ಲ ಅವರು ತಿಳಿಸಿದ್ದಾರೆ.

Leave a Reply

error: Content is protected !!