ಒಡಿಯೂರು ಶ್ರೀ ಘಟ ಸಮಿತಿಯಿಂದ ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಆವರಣ ಸ್ವಚ್ಛತೆ

ಶೇರ್ ಮಾಡಿ

ಪಟ್ಪೂರು: ಒಡಿಯೂರು ಶ್ರೀ ಪಟ್ರಮೆ ಘಟ ಸಮಿತಿ ವತಿಯಿಂದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಆವರಣ ಸ್ವಚ್ಛತಾ ಕಾರ್ಯ ಜು.16ರಂದು ನಡೆಯಿತು.

ಘಟ ಸಮಿತಿಯ ಸೇವಾ ದೀಕ್ಷಿತೆ ಶ್ರೀಮತಿ ಸುಮಿತ್ರ ಹಾಗೂ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

ಒಡಿಯೂರು ಶ್ರೀ ಘಟ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು ಶಾಲೆ, ದೇವಸ್ಥಾನಗಳು ಸೇರಿದಂತೆ ಅನೇಕ ಕಡೆಗಳಲ್ಲಿ ತಮ್ಮ ಸ್ವಚ್ಛತಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಘಟ ಸಮಿತಿಯ ಅಧ್ಯಕ್ಷ ಲಿಂಗಪ್ಪ ಎಂ, ಕಾರ್ಯದರ್ಶಿ ವಿನೋದ, ಒಡಿಯೂರು ಶ್ರೀ ಸೌತಡ್ಕ, ಒಡಿಯೂರು ಶ್ರೀ ಎಸ್ ಎಂ, ಒಡಿಯೂರು ಶ್ರೀ ಸೌಪರ್ಣಿಕ, ಒಡಿಯೂರು ಶ್ರೀ ಶಿವ ಕೃಪಾ, ಒಡಿಯೂರು ಶ್ರೀ ಶ್ರೀಶಕ್ತಿ ಸಂಘಗಳ ಸದಸ್ಯರಾದ ಉಷಾ, ಲಲಿತ, ಪೂರ್ಣಿಮಾ, ಲಕ್ಷ್ಮಿ, ಗಿರಿಜಾ, ಸವಿತಾ, ಸುಶೀಲಾ, ನಕ್ಕುರ, ಸುನಿಲ್ ಬಿ, ಮೀನಾಕ್ಷಿ ತಂಡದ ಜತೆಗಿದ್ದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.
ಶಾಲೆಯ ಕಡೆಯಿಂದ ಇವರಿಗೆ ಪಾನೀಯ ಹಾಗೂ ಫಲಹಾರದ ವ್ಯವಸ್ಥೆಯನ್ನು ಮಾಡಲಾಯಿತು.

Leave a Reply

error: Content is protected !!