ಮಹಿಳೆಯರಿಗೆ ಮೊಬೈಲ್‌ ನಂ. ನೀಡಿ ಕಾಲ್ ಮಾಡುವಂತೆ ಟಾರ್ಚರ್; ವ್ಯಕ್ತಿಗೆ ಧರ್ಮದೇಟು

ಶೇರ್ ಮಾಡಿ

ಚಿಕ್ಕಮಗಳೂರು: ಡಿಶ್ ರಿಪೇರಿ ಮಾಡುತ್ತಿದ್ದವನನ್ನು ಸ್ಥಳಿಯರು ರಿಪೇರಿ ಮಾಡಿದ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆ ಗ್ರಾಮದಲ್ಲಿ ನಡೆದಿದೆ.
ಜಯಪುರದಲ್ಲಿ ಡಿಶ್ ರಿಪೇರಿ ಕೆಲಸ ಮಾಡುತ್ತಿದ್ದ ಬಶೀರ್ ಎಂಬಾತ ಮಹಿಳೆಯರಿಗೆ ಮೊಬೈಲ್ ನಂಬರ್ ಕೊಟ್ಟು ಕಾಲ್ ಮಾಡುವಂತೆ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ.
ಮಹಿಳೆಯರಿಗೆ ತನ್ನ ಮೊಬೈಲ್ ನಂಬರ್ ಕೊಡುತ್ತಿದ್ದ ಬಶೀರ್, ಕಟ್ಟೆಮನೆ ಗ್ರಾಮದ ರಮೇಶ್ ಎಂಬವರ ಪತ್ನಿಗೆ ಮೊಬೈಲ್ ನಂಬರ್ ನೀಡಿದ್ದ. ಬಳಿಕ ಮಹಿಳೆಗೆ ಕಾಲ್ ಮಾಡುವಂತೆ ಪಿಡಿಸುತ್ತಿದ್ದ.
ಡಿಶ್‌ ರಿಪೇರಿ ಮಾಡುತ್ತಿದ್ದ ಬಶೀರ್ ಹೆಂಡತಿಗೆ ಮೊಬೈಲ್ ನಂಬರ್ ನೀಡಿದ್ದಕ್ಕೆ ಗಂಡ ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಘಟನೆ ನಡೆದಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

Leave a Reply

error: Content is protected !!