ದೆಹಲಿಯಲ್ಲಿ ತುಳುನಾಡಿನ ಆಟಿ ಅಮಾವಾಸ್ಯೆಯ ಉಚಿತ ಕಷಾಯ ವಿತರಣೆ

ಶೇರ್ ಮಾಡಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ತುಳುನಾಡಿನ ಮಣ್ಣಿನ ಆಚರಣೆ ನಡೆದಿದೆ. ಆಟಿ ಅಮಾವಾಸ್ಯೆಯ ದಿನವಾದ ಸೋಮವಾರ ಮುಂಜಾನೆ 6 ರಿಂದ 8 ವರೆಗೆ ದೆಹಲಿಯ ಕರ್ನಾಟಕ ಸಂಘದ ಬಳಿಯ ಹಾಳೆ ಮರದ ತೊಗಟೆಯ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆನ್ನು ಮಾಡಲಾಗಿತ್ತು. ನೆರೆದ ನೂರಾರು ಮಂದಿ ಈ ಕಾರ್ಯಕ್ರಮ,ದಲ್ಲಿ ಮದ್ದು ಸೇವಿಸಿ ತಮ್ಮ ಆರೋಗ್ಯ ವರ್ಧನೆಯನ್ನು ಮಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಷಾಯ ಸೇವಿಸುವ ಮೂಲಕ ಮಾಡಿದ ಪೋರ್ಟೀಸ್ ಆಸ್ಪತ್ರೆಯ ಆಂಕಾಲಜೀ ವಿಭಾಜದ ಮುಖ್ಯಸ್ಥರು, ಕ್ಯಾನ್ಸರ್‍ ಸರ್ಜನ್ ಡಾ. ಬಿ.ನಿರಂಜನ್ ನಾಯ್ಕ್ ಅವರು ಮಾತನಾಡಿ ಆಟಿ ಅಮವಾಸ್ಯೆಯ ದಿನ ಹಾಳೆ ಮರದ ಕಷಾಯದಿಂದ ಆಗುವ ಉಪಯೋಗಗಳನ್ನು ನೆರೆದವರಿಗೆ ತಿಳಿಸಿ ಇಂತಹ ಸದುಪಯೋಗವನ್ನು ದೆಹಲಿಯಲ್ಲಿದ್ದೂ ಆಚರಿಸಲು ಅನುವು ಮಾಡಿದ ಆಯೋಜಕರನ್ನು ಪ್ರಶಂಸಿಸಿದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ತುಳುನಾಡಿನ ಮಣ್ಣಿನ ಆಚರಣೆ ನಡೆದಿದೆ. ಆಟಿ ಅಮಾವಾಸ್ಯೆಯ ದಿನವಾದ ಸೋಮವಾರ ಮುಂಜಾನೆ 6 ರಿಂದ 8 ವರೆಗೆ ದೆಹಲಿಯ ಕರ್ನಾಟಕ ಸಂಘದ ಬಳಿಯ ಹಾಳೆ ಮರದ ತೊಗಟೆಯ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆನ್ನು ಮಾಡಲಾಗಿತ್ತು. ನೆರೆದ ನೂರಾರು ಮಂದಿ ಈ ಕಾರ್ಯಕ್ರಮ,ದಲ್ಲಿ ಮದ್ದು ಸೇವಿಸಿ ತಮ್ಮ ಆರೋಗ್ಯ ವರ್ಧನೆಯನ್ನು ಮಾಡಿದರು.
ಈ ಹಾಳೆ ಮರದ ತೊಗಟಿನ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆನ್ನು ಮಂಗಳೂರು ಮೂಲದ ಪ್ರಕಾಶ್ ಶೆಟ್ಟಿ ಉಳೆಪಾಡಿ ಮತ್ತು ಉಸ್ಮಾನ್ ಅಬ್ದುಲ್ ಷರೀಫ್ ಅವರು ಉಚಿತವಾಗಿ ಹಂಚುವ ಮೂಲಕ ತಮ್ಮ ತಾಯ್ನಾಡಿನ ಆಚರಣೆಯನ್ನು ದೆಹಲಿಯಲ್ಲಿ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ದೆಹಲಿಯ ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರು ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಲು ಸಹಕರಿಸಿದರು.

Leave a Reply

error: Content is protected !!