4 ದಿನ ಎಲ್ಲೋ ಅಲರ್ಟ್‌; ಮಳೆ ಬಿರುಸು ನಿರೀಕ್ಷೆ

ಶೇರ್ ಮಾಡಿ

ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನಗಳ ವರೆಗೆ ಮಳೆ ಮತ್ತಷ್ಟು ಮಳೆ ಬಿರುಸು ಪಡೆಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಮುನ್ಸೂಚನೆ ಯಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜು. 17ರಿಂದ 20ರ ವರೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.
ಈ ವೇಳೆ ಬಿರುಸಿನಿಂದ ಕೂಡಿದ ಮಳೆಯಾಗಲಿದ್ದು, ಗಾಳಿ, ಸಮುದ್ರದ ಅಬ್ಬರ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ವೇಣೂರು, ಚಾರ್ಮಾಡಿ, ಕಲ್ಲೇರಿ, ಮಡಂತ್ಯಾರು, ಬಂಟ್ವಾಳ, ಬಿ.ಸಿ.ರೋಡು, ಸುಳ್ಯ, ಸುಬ್ರಹ್ಮಣ್ಯ, ಕಡಬ, ಉಪ್ಪಿನಂಗಡಿ, ವಿಟ್ಲ, ಕನ್ಯಾನ, ಮಂಜೇಶ್ವರ, ಹರಿಹರ ಪಳ್ಳತ್ತಡ್ಕ, ಉಜಿರೆ, ಪುತ್ತೂರು, ಮೂಡು ಬಿದಿರೆ, ಸುರತ್ಕಲ್‌, ಶಿಬಾಜೆ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಸುರಿದಿದೆ.

Leave a Reply

error: Content is protected !!