ಪಡುಬಿದ್ರಿಯಲ್ಲೊಂದು ವಿಲಕ್ಷಣ ಘಟನೆ; ಡಿಕ್ಕಿ ಹೊಡೆದ ಕಾರನ್ನೇ ಎಳೆದೊಯ್ದ ಟಿಪ್ಪರ್

ಶೇರ್ ಮಾಡಿ

ಪಡುಬಿದ್ರಿ: ಕನ್ನಂಗಾರ್ ಬೈಪಾಸ್ ಬಳಿ ಟಿಪ್ಪರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದ ಸ್ಯಾಂಟ್ರೋ ಕಾರನ್ನು ಟಿಪ್ಪರ್ ಚಾಲಕ ಗಮನಿಸದೆ ಹೆಜಮಾಡಿಯ ಟೋಲ್ ಗೇಟ್ ವರೆಗೂ ಎಳೆದುಕೊಂಡು ಹೋಗಿರುವ ವಿಲಕ್ಷಣ ಪ್ರಸಂಗ ವರದಿಯಾಗಿದೆ.
ಬೇರೆ ಕಾರಿನವರು ಹೇಳಿದ ಬಳಿಕ ಟಿಪ್ಪರ್ ಚಾಲಕ ಹೆಜಮಾಡಿಯಲ್ಲಿ ನಿಲ್ಲಿಸಿದ್ದಾನೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

error: Content is protected !!