ಟೆಂಪೋ ಢಿಕ್ಕಿ; ಕಾರ್ಮಿಕ ಮಹಿಳೆಯರು, ಚಾಲಕನಿಗೆ ಗಾಯ

ಶೇರ್ ಮಾಡಿ

ಗೂಡ್ಸ್ ಟೆಂಪೋವೊಂದು ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದ ಘಟನೆ ರಾಷ್ಟೀಯ ಹೆದ್ದಾರಿ 66 ರ ಕಟಪಾಡಿಯಲ್ಲಿ ಜು.18ರ ಮಂಗಳವಾರ ನಡೆದಿದೆ.
ಈ ಅಪಘಾತದಿಂದ ರಾ.ಹೆ.ಯ ಗ್ರಾಸ್ ಕಟ್ಟಿಂಗ್ ನಡೆಸುತ್ತಿದ್ದ ಮೂವರು ಮಹಿಳಾ ಕಾರ್ಮಿಕರು ಹಾಗೂ ಗೂಡ್ಸ್ ಟೆಂಪೋ ಚಾಲಕ ಗಾಯಗೊಂಡಿದ್ದು, ಚಿಕಿತ್ಸೆಗೆ ಉಡುಪಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಪರಿಣಾಮ ಗೂಡ್ಸ್ ಟೆಂಪೋ ಮುಂಭಾಗ ನಜ್ಜುಗುಜ್ಜಾಗಿದೆ.
ಕಾಪು ಪೊಲೀಸ್ ಠಾಣಾ ಪೊಲೀಸರು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!