ಜು.22 ರಂದು ನೆಲ್ಯಾಡಿ ಪೇಟೆಯ ಉಳಿವಿಗಾಗಿ ಮೌನ ಪ್ರತಿಭಟನೆ, ಸಂಸದರಿಗೆ ಮನವಿ

ಶೇರ್ ಮಾಡಿ

ನೆಲ್ಯಾಡಿ:ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ ಇಂದ ಬಿಸಿ ರೋಡಿನವರೆಗೆ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು ನೆಲ್ಯಾಡಿ ಪೇಟೆಯ ಮಧ್ಯ ಭಾಗದಲ್ಲಿ ತಡೆಗೋಡೆಯನ್ನು ಕಟ್ಟುವ ಮೂಲಕ ಎರಡು ಬದಿಯು ಕಾಣದಂತೆ ರಸ್ತೆಯನ್ನು ನಿರ್ಮಿಸಿರುತ್ತಾರೆ. ಇಂತಹ ಅವೈಜ್ಞಾನಿಕ ಕಾಮಗಾರಿ ನೆಲ್ಯಾಡಿಯ ಭವಿಷ್ಯಕ್ಕೆ ಮಾರಕ. ಈ ರೀತಿಯ ಕಾಮಗಾರಿಯಿಂದ ವರ್ತಕರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಸಾರ್ವಜನಿಕರು, ಶಾಲಾ ಮಕ್ಕಳು, ವರ್ತಕರು, ಕಟ್ಟಡ ಮಾಲಕರು, ಆಟೋ ಚಾಲಕ ಮಾಲಕರು, ಜೀಪು ಚಾಲಕ ಮಾಲಕರು, ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಧರ್ಮದ ದರ್ಮಾಧಿಕಾರಿಗಳು ಹಾಗೂ ಅದರ ಆಡಳಿತ ಮಂಡಳಿಗಳ ಸದಸ್ಯರುಗಳು, ಎಲ್ಲಾ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳು ಹಾಗೂ ಸದಸ್ಯರು ಜು.22 ಶನಿವಾರ ಮದ್ಯಾಹ್ನ 12.00 ಗಂಟೆಗೆ ನೆಲ್ಯಾಡಿ ಪೇಟೆಗೆ ಆಗಮಿಸುವಂತೆ, ಅಲ್ಲದೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ನೆಲ್ಯಾಡಿಗೆ ಆಗಮಿಸಲಿದ್ದು ಹೆದ್ದಾರಿಯ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.

ಬಳಿಕ ಮಧ್ಯಾಹ್ನ 2.00 ಗಂಟೆಗೆ ನೆಲ್ಯಾಡಿ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಸಭೆ ಸೇರಿ ಸಮಸ್ತ ನಾಗರಿಕರ ಪರವಾಗಿ ರಸ್ತೆಯ ಎರಡು ಬದಿಯಿಂದಲೂ ಪೇಟೆ ಕಾಣುವ ರೀತಿಯಲ್ಲಿ ಪಿಲ್ಲರ್ ಗಳನ್ನು ಅಳವಡಿಸಿ ರಸ್ತೆ ನಿರ್ಮಿಸುವಂತೆ ಮನವಿ ನೀಡಲಿರುವ ಉದ್ದೇಶದಿಂದ ಫಲಾನುಭವಿಗಳಾದ ತಾವೆಲ್ಲರೂ ಮಧ್ಯಾಹ್ನ 12.00 ಗಂಟೆಯಿಂದ 2.00ಗಂಟೆಗೆ ತನಕ ಎಲ್ಲಾ ವರ್ತಕರು, ಆಟೋ ಚಾಲಕ-ಮಾಲಕರು, ಸಾರ್ವಜನಿಕರು, ವಿವಿಧ ಸಂಘದ ಪದಾಧಿಕಾರಿಗಳು ಅಂಗಡಿಗಳನ್ನು ಮುಚ್ಚಿ ಮೌನ ಪ್ರತಿಭಟನೆಯನ್ನು ಮಾಡುವುದರ ಮೂಲಕ ನಾವೆಲ್ಲರೂ ಸೇರಿ ನೆಲ್ಯಾಡಿ ಪೇಟೆ ಉಳಿಸಿಕೊಳ್ಳುವ ದೃಷ್ಟಿಯಲ್ಲಿ ಸಹಕರಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Leave a Reply

error: Content is protected !!