ಮೊಬೈಲ್ ಜಾಸ್ತಿ ಬಳಸಬೇಡ ಎಂದ ಪೋಷಕರು; ಸಿಟ್ಟಿಗೆದ್ದು ಜಲಪಾತಕ್ಕೆ ಜಿಗಿದ ಮಗಳು

ಶೇರ್ ಮಾಡಿ

ಮೊಬೈಲ್ ಬಳಕೆ ಮಾಡದವರು ಯಾರು ಇದ್ದಾರೆ ಈಗಿನ ಕಾಲದಲ್ಲಿ, ಮೊಬೈಲ್ ಇದ್ದಾರೆ ಮತ್ತೇನು ಬೇಡ ಎಂಬಂತಾಗಿದೆ ಈಗಿನ ಜನರಿಗೆ, ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಮೊಬೈಲ್ ಬಳಸುವವರೇ, ಸಣ್ಣ ಮಕ್ಕಳು ಮೊಬೈಲ್ ಹಿಡಿದುಕೊಂಡಾಗ ಗದರಿಸುವ ಪೋಷಕರು ಕೊನೆಗೆ ತಾವು ಮಾಡುವುದು ಕೂಡ ಅದನ್ನೇ,
ಮೊಬೈಲ್ ಗೀಳಿಗೆ ಬಿದ್ದರೆ ಅದರಿಂದ ಹೊರ ಬರುವುದು ಭಾರಿ ಕಷ್ಟ ಅದರಂತೆ ಇಲ್ಲೊಬ್ಬಳು ಯುವತಿ ಅತಿಯಾಗಿ ಮೊಬೈಲ್ ಅನ್ನು ಅತಿಯಾಗಿ ಬಳಕೆ ಮಾಡುತ್ತಿದ್ದಾಳೆ ಎಂದು ಮೊಬೈಲ್ ಜಾಸ್ತಿ ಬಳಸಬೇಡ ಎಂದು ಸ್ವಲ್ಪ ಗದರಿಸಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವತಿ ನೊಂದು ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಜಲಪಾತಕ್ಕೆ ಹಾರಿದ ಪ್ರಸಂಗ ನಡೆದಿದೆ.
ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಈ ಘಟನೆ ಕಳೆದ ಮಂಗಳವಾರ ನಡೆದಿದ್ದು ಪೋಷಕರು ಮಗಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾಳೆ ಎಂದು ಬೈದಿದ್ದಾರೆ ಅಷ್ಟಕ್ಕೇ ಕೋಪಮಾಡಿಕೊಂಡ ಯುವತಿ ಮನೆಯೊಂದ ಹೊರ ಬಂದವಳು ಸೀದಾ ಚಿತ್ರಕೋಟೆ ಜಲಪಾತದ ಬಳಿ ಬಂದಿದ್ದಾಳೆ ಜಲಪಾತದ ಸುತ್ತ ಆಚೆ ಈಚೆ ತಿರುಗಾಡಿದ್ದಾಳೆ ಬಳಿಕ ಜಲಪಾತದ ಬಂಡೆಗಳ ಬಳಿ ತೆರಳಿ ನಿಂತು ಸುಮಾರು 90 ಅಡಿ ಆಳಕ್ಕೆ ಜಿಗಿದಿದ್ದಾಳೆ. ಅಷ್ಟೋತ್ತಿಗೆ ಜಲಪಾತ ವೀಕ್ಷಣೆಗೆ ಬಂದಿದ್ದ ಕೆಲವು ಮಂದಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ಯುವತಿ ಅಷ್ಟೋತ್ತಿಗಾಗಲೇ ಜಲಪಾತಕ್ಕೆ ಜಿಗಿದಿದ್ದಾಳೆ ಈ ಘಟನೆಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕೋಪದಿಂದ ಜಲಪಾತಕ್ಕೆ ಜಿಗಿದ ಯುವತಿಗೆ ನೀರಿಗೆ ಬಿದ್ದ ವೇಳೆ ಬಹುಶ ಜ್ಞಾನೋದಯವಾಗಿದೆ ನಾನು ಮಾಡಿದ್ದು ತಪ್ಪು ಎಂದು ಬಳಿಕ ಜೀವ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾಳೆ ಕೂಡಲೇ ಅಲ್ಲೇ ಇದ್ದ ಕೆಲ ಯುವಕರು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ಯುವತಿಯ ರಕ್ಷಣೆ ಮಾಡಿದ್ದಾರೆ.
ಬಳಿಕ ಯುವತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿ ಬಳಿಕ ಪೋಷಕರಿಗೆ ಒಪ್ಪಿಸಿದ್ದಾರೆ. ಪುಣ್ಯಕ್ಕೆ ಯುವತಿಯ ಆಯುಷ್ಯ ಚೆನ್ನಾಗಿತ್ತು ಹಾಗಾಗಿ ಅಷ್ಟು ಎತ್ತರದಿಂದ ಜಿಗಿದರೂ ಪಾರಾಗಿ ಬಂದಿದ್ದಾಳೆ, ಹಾಗಾಗಿ ಯಾವುದೇ ಕೋಪಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ತಾಳ್ಮೆ ಅತೀ ಅಗತ್ಯ.

Leave a Reply

error: Content is protected !!