ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ: ಇಬ್ಬರು ವಶಕ್ಕೆ, ಓರ್ವ ಪರಾರಿ

ಶೇರ್ ಮಾಡಿ

ಮಣಿಪಾಲದ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಟಿಕೆ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ಪ್ಯೆಕಿ ಖಾಲಿದ್‌ ತಲೆಮರೆಸಿಕೊಂಡಿದ್ದು, ಸಲಾಮತ್‌, ಚಂದ್ರರನ್ನು ವಶಕ್ಕೆ ಪಡೆಯಲಾಗಿದೆ.
ವಿದ್ಯಾರತ್ನ ನಗರದಲ್ಲಿರುವ ಭವಾನಿ ಎಂಬ ಹೆಸರಿನ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಬಂದ ಲಭ್ಯ ಮಾಹಿತಿ ಮೇರೆಗೆ ಶೋಧನಾ ವಾರೆಂಟ್‌ ಪಡೆದುಕೊಂಡು ಸಿಬಂದಿಗಳು ದಾಳಿ ನಡೆಸಿ ಅನೈತಿಕ ವೇಶ್ಯಾವಟಿಕೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಲ್ಲಿದ್ದ 4 ಮೊಬೈಲ್‌ ಪೋನ್‌ಗಳು, 10000 ರೂ.ನಗದು, -ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!