ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಹಲ್ಲೆ: ಇಬ್ಬರ ಬಂಧನ

ಶೇರ್ ಮಾಡಿ

ಮಂಗಳೂರು: ಶುಕ್ರವಾರ ರಾತ್ರಿ ವಿದ್ಯಾರ್ಥಿನಿಯರೊಂದಿಗೆ ಬೀಚ್‌ಗೆ ಹೋಗಿ ವಾಪಸಾಗುತ್ತಿದ್ದ ನಗರದ ಇಬ್ಬರು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರಿನ ಅಳಪೆಯ ದೀಕ್ಷಿತ್‌(32) ಮತ್ತು ಅಳಪೆ ಬಜಾಲ್‌ನ ಲಾಯ್ಡ ಪಿಂಟೋ(32) ಬಂಧಿತರು. ಆರೋಪಿಗಳಿಂದ ಸ್ಕೂಟರ್‌ ಮತ್ತು ಮೊಬೈಲ್‌ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಕಾಲೇಜೊಂದರಲ್ಲಿ ಬ್ಯಾಚುಲರ್‌ ಆಫ್ ಹಾಸ್ಪಿಟಲ್‌ ಆ್ಯಡ್ಮಿನಿಸ್ಟ್ರೇಷನ್‌ ವ್ಯಾಸಂಗ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿನಿಯರೊಂದಿಗೆ ಇಬ್ಬರು ವಿದ್ಯಾರ್ಥಿಗಳು ಪಣಂಬೂರು ಬೀಚ್‌ಗೆ ಹೋಗಿ ವಾಪಸ್‌ ಬರುತ್ತಿದ್ದಾಗ ಬಿಜೈ ಕಾಪಿಕಾಡ್‌ನ‌ 7ನೇ ಕ್ರಾಸ್‌ನಲ್ಲಿ ಅವರನ್ನು ಆರೋಪಿಗಳು ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರು.
ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

error: Content is protected !!