1876 ಸಬ್ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅಧಿಸೂಚನೆ: ಆನ್‌ಲೈನ್‌ ಅರ್ಜಿ ಆಹ್ವಾನ

ಶೇರ್ ಮಾಡಿ

ಸಿಬ್ಬಂದಿ ನೇಮಕಾತಿ ಆಯೋಗವು ಇದೀಗ 1876 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ದೆಹಲಿ ಪೊಲೀಸ್‌ ಪಡೆಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂದಿನಿಂದಲೇ ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ : ಸಿಬ್ಬಂದಿ ನೇಮಕಾತಿ ಆಯೋಗ
ಹುದ್ದೆ ಹೆಸರು : ಸಬ್‌ ಇನ್ಸ್‌ಪೆಕ್ಟರ್
ಹುದ್ದೆಗಳ ಸಂಖ್ಯೆ : 1876

ಹುದ್ದೆಗಳ ವಿವರ
ದೆಹಲಿ ಪೊಲೀಸ್‌ ಪಡೆ ಸಬ್‌ ಇನ್ಸ್‌ಪೆಕ್ಟರ್ (ಪುರುಷ) : 109
ದೆಹಲಿ ಪೊಲೀಸ್‌ ಪಡೆ ಸಬ್‌ ಇನ್ಸ್‌ಪೆಕ್ಟರ್ (ಮಹಿಳಾ) : 53
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಬ್‌ಇನ್ಸ್‌ಪೆಕ್ಟರ್‌ (ಪುರುಷ) : 1601
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಬ್‌ಇನ್ಸ್‌ಪೆಕ್ಟರ್‌ (ಮಹಿಳಾ) : 113

ಎಸ್‌ಎಸ್‌ಸಿ ಎಸ್‌ಐ ಹುದ್ದೆಗೆ ವಿದ್ಯಾರ್ಹತೆ
ಯಾವುದೇ ವಿಶ್ವವಿದ್ಯಾಲಯ / ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಾಸ್ ಮಾಡಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ದೆಹಲಿ ಪೊಲೀಸ್‌ ಎಸ್‌ಐ ಹುದ್ದೆಗೆ ವಾಹನ ಚಾಲನ ಪರವಾನಗಿ ಪಡೆದಿರಬೇಕು.

ವಯಸ್ಸಿನ ಅರ್ಹತೆ
ದಿನಾಂಕ 01-08-2023 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.
ಸರ್ಕಾರಿ ನಿಯಮಗಳನ್ವಯ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಕೆಟಗರಿಯವರಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭ ದಿನಾಂಕ: 22-07-2023
ಆನ್‌ಲೈನ್‌ ಅರ್ಜಿ ಸ್ವೀಕಾರ ಕೊನೆ ದಿನಾಂಕ: 15-08-2023 ರ ರಾತ್ರಿ 11 ಗಂಟೆವರೆಗೆ.
ಅರ್ಜಿ ತಿದ್ದುಪಡಿಗೆ ಕೊನೆ ದಿನಾಂಕ : ಆಗಸ್ಟ್‌ 16 ರಿಂದ 17, 2023
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಅಕ್ಟೋಬರ್, 2023

ಅರ್ಜಿ ಸಲ್ಲಿಸುವ ವಿಧಾನ

  • ಎಸ್‌ಎಸ್‌ಸಿ ವೆಬ್‌ಸೈಟ್‌ https://ssc.nic.in/ ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ ನಲ್ಲಿ ‘New User? Registration Here’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ.

ಅಪ್ಲಿಕೇಶನ್ ಶುಲ್ಕ ಮಾಹಿತಿ : ರೂ.100.
ಕರ್ನಾಟಕದಲ್ಲಿ ಎಲ್ಲೆಲ್ಲಿ ಪರೀಕ್ಷೆ ?
ಬೆಂಗಳೂರು, ಉಡುಪಿ, ಕಲಬುರಗಿ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ.
ವೇತನ ಶ್ರೇಣಿ
ಸಬ್‌ಇನ್ಸ್‌ಪೆಕ್ಟರ್ (ಜಿಡಿ) ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ : Rs.35,400-1,12,400.
ಸಬ್‌ಇನ್ಸ್‌ಪೆಕ್ಟರ್ (ಎಕ್ಸಿಕ್ಯೂಟಿವ್)- ದೆಹಲಿ ಪೊಲೀಸ್ :Rs.35,400-1,12,400.

ನೇಮಕ ಪ್ರಕ್ರಿಯೆ ಹಂತಗಳು

  1. ಪೇಪರ್‌-1 ಲಿಖಿತ ಪರೀಕ್ಷೆ
  2. ಪೇಪರ್‌-2 ಲಿಖಿತ ಪರೀಕ್ಷೆ
  3. ದೈಹಿಕ ಸಾಮರ್ಥ್ಯ ಪರೀಕ್ಷೆ / ದೈಹಿಕ ಸಹಿಷ್ಣುತೆ ಪರೀಕ್ಷೆ.
  4. ಡೀಟೇಲ್ಡ್‌ ಮೆಡಿಕಲ್ ಟೆಸ್ಟ್‌

ಉದ್ಯೋಗ ವಿವರ
ಹುದ್ದೆಯ ಹೆಸರು ಸಬ್ಇನ್ಸ್‌ಪೆಕ್ಟರ್‌
ವಿವರ ಸಿಬ್ಬಂದಿ ನೇಮಕಾತಿ ಆಯೋಗ ಅಧಿಸೂಚನೆ.
ಪ್ರಕಟಣೆ ದಿನಾಂಕ 2023-07-22
ಕೊನೆ ದಿನಾಂಕ 2023-08-15
ಉದ್ಯೋಗ ಕ್ಷೇತ್ರ ಸರ್ಕಾರಿ ಉದ್ಯೋಗ
ವೇತನ ವಿವರ INR 35400 to 112400 /Month
ವಿದ್ಯಾರ್ಹತೆ ಪದವಿ

ವೆಬ್‌ಸೈಟ್‌ ವಿಳಾಸ https://ssc.nic.in/

Leave a Reply

error: Content is protected !!