ಮಹಿಳಾ ಹಾಲು ಉತ್ಪಾದಕರ ಸಂಘದಲ್ಲಿ ಕಂಪ್ಯೂಟರ್ ಕಳವು

ಶೇರ್ ಮಾಡಿ

ಮಹಿಳಾ ಹಾಲು ಉತ್ಪಾದಕರ ಸಂಘದಿಂದ ಕಳ್ಳರು ಕಂಪ್ಯೂಟರ್ ಕಳವು ಮಾಡಿರುವ ಘಟನೆ ಬಳ್ಕುಂಜೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕಳ್ಳರು ಹಾಲು ಉತ್ಪಾದಕರ ಸಂಘದ ಹಿಂಭಾಗದ ಕಿಟಕಿಯ ಕಬ್ಬಿಣದ ಸರಳು ತುಂಡರಿಸಿ ಒಳಭಾಗಕ್ಕೆ ಬಂದು ಹಣದ ತಿಜೋರಿ ಜಾಲಾಡಿ ಚೆಲ್ಲಾಪಿಲ್ಲಿ ಮಾಡಿರುವ ಕಳ್ಳರು, ಟೇಬಲ್ ಮೇಲಿದ್ದ ಕಂಪ್ಯೂಟರ್ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದು ಎರಡನೇ ಬಾರಿ ಹಾಲಿನ ಸೊಸೈಟಿಯಲ್ಲಿ ಕಳ್ಳತನ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಕಳೆದ ವರ್ಷ ಸುಮಾರು ನಾಲ್ಕು ಸಾವಿರದಷ್ಟು ಹಣವನ್ನು ಇದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿತ್ತು ಎಂದು ಸೊಸೈಟಿ ಕಾರ್ಯದರ್ಶಿ ವನಿತಾ ಮಾಹಿತಿ ನೀಡಿದ್ದಾರೆ. ಯಾರೋ ಗೊತ್ತಿದ್ದವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು ಸಮೀಪದ ಅಂಗನವಾಡಿಯ ಬೀಗ ಮುರಿದು ಒಳಹೊಕ್ಕ ಕಳ್ಳರು ಏನು ಸಿಗದೆ ವಾಪಾಸಾಗಿದ್ದಾರೆ ಎಂದು ತಿಳಿದು ಬಂದಿದೆ.ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

error: Content is protected !!