ಕೊಕ್ಕಡ-ಪಟ್ರಮೆ: ವಿಪರೀತ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಆಯಾಯ ತಾಲೂಕಿನ ತಹಶೀಲ್ದಾರರಿಗೆ ಬೆಳಗ್ಗೆ 6:30ರ ಒಳಗೆ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆಗೆ ರಜೆ ನೀಡುವ ಕುರಿತು ಆದೇಶ ನೀಡಬೇಕಾಗಿ ಜುಲೈ 23ರ ರಾತ್ರಿ ಸೂಚನೆ ನೀಡಿತ್ತು.
ಆದರೆ ಜುಲೈ 24ರ ಬೆಳಗ್ಗೆ 8 ಗಂಟೆಯ ಸುಮಾರಿಗೆ ತಾಲೂಕು ತಹಶೀಲ್ದಾರ್ ರಿಂದ ಅನೇಕ ಹಂತಗಳ ಅಧಿಕಾರಿಗಳನ್ನು ದಾಟಿ ಮುಖ್ಯೋಪಾಧ್ಯಾಯರ ಹೆಗಲೇರಿಸಿದರು. ಶಾಲೆಯಿಂದ ಸಂದೇಶ ಪೋಷಕರ ಗಮನಕ್ಕೆ ಬಂದಾಗ ಕೊಕ್ಕಡ ಪಟ್ರಮೆಯ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯ ಕಡೆ ಮುಖ ಮಾಡಿ ಆಗಿತ್ತು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಕ್ಕಳು ಬಸ್ಸು ಹತ್ತಿ ಅಥವಾ ನಡೆದುಕೊಂಡು ಬರುವ ಪರಿಸ್ಥಿತಿ ಇದ್ದು 8 ಗಂಟೆಯ ಸುಮಾರಿಗೆ ಬಂದ ಬಂದ ಸಂದೇಶ ನೆಟ್ವರ್ಕ್ ಇಲ್ಲದೆ ಹಲವು ಪೋಷಕರ ಮೊಬೈಲಿಗೆ 9ಗಂಟೆ ನಂತರ ತಲುಪಿತ್ತು.