ವಲಯ ಮಟ್ಟದ ಚೆಸ್ ಪಂದ್ಯಾಟ; ಕಡಬ ಕ್ನಾನಾಯ ಜ್ಯೋತಿ ಶಾಲೆಯ ವಿದ್ಯಾರ್ಥಿಗಳ ವಿಶೇಷ ಸಾಧನೆ

ಶೇರ್ ಮಾಡಿ

ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಚೆಸ್ ಪಂದ್ಯಾಟವು ದಿನಾಂಕ 24.07.2023 ಸೋಮವಾರದಂದು ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆ ಮರ್ದಾಳದಲ್ಲಿ ಜರಗಿತು.
ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಪ್ರಾಥಮಿಕ ಶಾಲಾ ಹುಡುಗಿಯರ ವಿಭಾಗದಲ್ಲಿ ಆರನೇ ತರಗತಿಯ ಅಲ್ವಿಷಾ ಪಿ.ಪಿ. ಪ್ರಥಮ, ಧಾತ್ರಿ ಎ ತೃತೀಯ, ಹುಡುಗರ ವಿಭಾಗದಲ್ಲಿ ಏಳನೆಯ ತರಗತಿಯ ಅದ್ವೈತ್ ಎಸ್.ಪಿ. ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರೌಢಶಾಲಾ ಹುಡುಗಿಯರ ವಿಭಾಗದಲ್ಲಿ ಹತ್ತನೆಯ ತರಗತಿಯ ಆರ್ಯ ಎಸ್.ಪಿ. ಪ್ರಥಮ ಸ್ಥಾನ ಹಾಗೂ ಹುಡುಗರ ವಿಭಾಗದಲ್ಲಿ ಹತ್ತನೆಯ ತರಗತಿಯ ಕೃಷ್ಣ ಕಾರ್ತಿಕ ಯು ತೃತೀಯ ಸ್ಥಾನಗಳಿಸಿದ್ದಾರೆ.

Leave a Reply

error: Content is protected !!