ಜಿಂಕೆ ಶಿಕಾರಿ; ಇಬ್ಬರ ಬಂಧನ

ಶೇರ್ ಮಾಡಿ

ಮಂಡಗದ್ದೆ ವಲಯ ವ್ಯಾಪ್ತಿಯ ಕುಳ್ಳುಂಡೆ ಗ್ರಾಮದ ಶೇಡ್ ನಲ್ಲಿ ಅಕ್ರಮವಾಗಿ ಜಿಂಕೆಯನ್ನು ಶಿಕಾರಿ ಮಾಡಿ ಮಾಂಸಕ್ಕಾಗಿ ಕಡಿಯುತ್ತಿರುವ ಸಂದರ್ಭದಲ್ಲಿ ಮಂಡಗದ್ದೆ ವಲಯ ಅಧಿಕಾರಿ ಆದರ್ಶ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ದಾಳಿ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಜಿಂಕೆ ಮಾಂಸ ಮತ್ತು ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮತ್ತು ಆರ್ ಎಫ್ ಒ ಆದರ್ಶ ಇವರುಗಳ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸುಹಾಸ್, ಗಸ್ತು ಅರಣ್ಯ ಪಾಲಕರದ ದುರ್ಗಪ್ಪ ಡಿ, ಸಂತೋಷ್ ಕುಮಾರ್ ಮತ್ತು ವಲಯದ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

error: Content is protected !!