ಜುಲೈ 30, ಅರಸಿನಮಕ್ಕಿಯ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಬಿ.ತ್ಯಾಂಪಣ್ಣ ಶೆಟ್ಟಿಗಾರ್‌ ರವರಿಗೆ ಸನ್ಮಾನ ಕಾರ್ಯಕ್ರಮ

ಶೇರ್ ಮಾಡಿ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ನಿವೃತ್ತಿ ಹೊಂದುತ್ತಿರುವ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ತ್ಯಾಂಪಣ್ಣ ಶೆಟ್ಟಿಗಾರ್‌ ರವರನ್ನು ಶಾಸಕರ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಜುಲೈ 30 ನಡೆಯಲಿದೆ.

ನಾಲ್ಕು ಗ್ರಾಮಗಳಾದ ಹತ್ಯಡ್ಕ, ಶಿಬಾಜೆ, ರೆಖ್ಯ, ಶಿಶಿಲ ಗ್ರಾಮಗಳ ಎಲ್ಲ ಸದಸ್ಯರುಗಳು ಮಹಾಸಭೆಯಲ್ಲಿ ತಪ್ಪದೆ ಭಾಗವಹಿಸುವಂತೆ ಹಾಗೂ ಸೊಸೈಟಿಯ ಒಟ್ಟು 5 ಮಹಾಸಭೆಗಳ ಪೈಕಿ ಕನಿಷ್ಠ 2 ಮಹಾಸಭೆಗಳಿಗೆ ಹಾಜರಾಗಿದ್ದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಮತದಾನ ಮಾಡುವ, ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇರುತ್ತದೆ ಎಂದು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ತಿಳಿಸಿದರು.

Leave a Reply

error: Content is protected !!