ಮನುಷ್ಯನಿಗೆ ಕಣ್ಣಿನ ದೃಷ್ಟಿ ಯಾವಾಗಲೂ ಚೆನ್ನಾಗಿರಬೇಕು. ಹಾಗಿದ್ದಾಗ ಮಾತ್ರ ಆತ ತನ್ನ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಮಾಡಿ ಕೊಳ್ಳಲು ಸಾಧ್ಯ. ವಯಸ್ಸಾದ ಮೇಲೆ ಕಣ್ಣಿಗೆ ಪೊರೆ ಬರುವುದನ್ನು ಕೇಳಿದ್ದೇವೆ. ಆದರೆ ವಯಸ್ಸಿರುವಾಗ ಕಣ್ಣುಗಳಿಗೆ ತೊಂದರೆ ಉಂಟಾಗಬಹುದಾದ ಸಾಧ್ಯತೆ ಇರುತ್ತದೆ. ದೊಡ್ಡವರು ಚಿಕ್ಕವರು ಎನ್ನದೆ ಕಣ್ಣುಗಳ ಬಣ್ಣ ಬದಲಾಗುತ್ತದೆ.
ಉರಿಯುತದಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ನಮ್ಮ ಕಣ್ಣಿನಲ್ಲಿ ಕಪ್ಪಾದ ಕಣ್ಣು ಗುಡ್ಡೆಯ ಸುತ್ತಲೂ ಬಿಳಿ ಬಣ್ಣ ಇರುತ್ತದೆ. ಇದನ್ನು ಒಂದು ಪಾರದರ್ಶಕ ಪದರ ರಕ್ಷಿಸುತ್ತದೆ. ಅದನ್ನು ವೈದ್ಯಕೀಯ ಭಾಷೆ ಯಲ್ಲಿ ಕನ್ಜನ್ಕ್ಟಿವಾ ಎಂದು ಕರೆಯಲಾಗುತ್ತದೆ.
ಈ ಭಾಗದಲ್ಲಿ ರಕ್ತ ನಾಳಗಳು ಒಂದು ವೇಳೆ ಉರಿಯುತದ ಸಮಸ್ಯೆಗೆ ಗುರಿಯಾದರೆ ಕಣ್ಣುಗಳ ಬಿಳಿ ಭಾಗ ಕೆಂಪು ಬಣ್ಣ ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದರ ಜೊತೆಗೆ ಅಂಟು ಅಂಟಾದ ಡಿಸ್ಚಾರ್ಜ್ ಹೊರಬರುತ್ತದೆ. ಕೆಲವು ವಾರಗಳಲ್ಲಿ ಇದು ತಾನಾಗಿಯೇ ಸರಿ ಹೋಗುತ್ತದೆ. ಆದರೆ ಕೆಲವರಿಗೆ ಮಾತ್ರ ವಿಶೇಷವಾದ ವೈದ್ಯಕೀಯ ಪರೀಕ್ಷೆ ಅಗತ್ಯವಿರುತ್ತದೆ.
ಕಾಂಜಂಕ್ಟಿವಿಟಿಸ್ ವಿಧಗಳು
ಈ ಸಮಸ್ಯೆ ಬರಲು ಕಾರಣಗಳು ಏನು ಎಂಬುದನ್ನು ಆಧರಿಸಿ ವೈದ್ಯಕೀಯವಾಗಿ ಕಾಂಜಂಕ್ಟಿವಿಟಿಸ್ ಅನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅಲರ್ಜಿ ಯಿಂದ, ಸೋಂಕಿನಿಂದ ಮತ್ತು ರಾಸಾಯನಿಕ ಅಂಶ ಗಳಿಂದಾಗಿ.
ಅಲರ್ಜಿಯಿಂದ ಉಂಟಾಗುವ ಕಾಂಜಂಕ್ಟಿವಿಟಿಸ್: ಸೀಸನಲ್ ಅಲರ್ಜಿ ಯಾರಿಗೆ ಇರುತ್ತದೆ ಅಂತಹವರಿಗೆ ಈ ಸಮಸ್ಯೆ ಇರುತ್ತದೆ. Giant papillary conjunctivitis ಸಾಮಾನ್ಯ ಅಲರ್ಜಿಯ ಕಾಂಜಂಕ್ಟಿವಿಟಿಸ್ ಆಗಿದ್ದು, ಕೊಳೆಯಾದ ಕಾಂಟಾಕ್ಟ್ ಲೆನ್ಸ್ ಕಣ್ಣುಗಳಿಗೆ ಕಿರಿಕಿರಿ ಉಂಟು ಮಾಡುವುದರಿಂದ ಉಂಟಾಗುತ್ತದೆ.
ಸೋಂಕಿನಿಂದ ಉಂಟಾಗುವ ಕಾಂಜಂಕ್ಟಿವಿಟಿಸ್
ಇದು ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಬೇರೆ ಬೇರೆ ತರಹದ ಬ್ಯಾಕ್ಟೀರಿಯಾ ಗಳು ಹಾಗೂ ವೈರಸ್ ಗಳಿಂದ ಕಂಡುಬರುವ ಈ ಸಮಸ್ಯೆ ಸ್ವಚ್ಛತೆ ಇಲ್ಲದಿದ್ದರೆ ಕಣ್ಣುಗಳಿಗೆ ಕಾಂಜಂಕ್ಟಿವಿಟಿಸ್ ಆಗುತ್ತದೆ.
ಕಲುಷಿತ ಕಣ್ಣುಗಳ ಮೇಕಪ್ ಅಥವಾ ಲೋಶನ್ ಬಳಸುವುದರಿಂದ ಮತ್ತು ಕೊಳೆಯಾಗಿರುವ ಕಾಂಟಾಕ್ಟ್ ಲೆನ್ಸ್ ಬಳಸುವುದರಿಂದ ಈ ಸಮಸ್ಯೆ ಕಂಡು ಬರುತ್ತದೆ. ಆಗ ತಾನೆ ಹುಟ್ಟಿದ ಮಕ್ಕಳಲ್ಲಿ ಕೂಡ ಕನ್ಜನ್ಕ್ಟಿವೈಟಿಸ್ ಆಗಿರುತ್ತದೆ ಆದರೆ ಇದನ್ನು ತಕ್ಷಣವೇ ಚಿಕಿತ್ಸೆ ಮೂಲಕ ಪರಿಹರಿಸಬೇಕು.
ಇಲ್ಲದಿದ್ದರೆ ಹುಟ್ಟುವ ಮಗು ಕಣ್ಣು ಕಳೆದುಕೊಳ್ಳ ಬೇಕಾಗುತ್ತದೆ! ಡೆಲಿವರಿ ಸಂದರ್ಭದಲ್ಲಿ ಗೊನೇರಿಯ ಅಥವಾ ಬೇರೆ ಬಗೆಯ ಬ್ಯಾಕ್ಟೀರಿಯಾ ಸೋಂಕುಗಳಿಗೆ ಕಣ್ಣುಗಳು ಒಳಗಾಗಿ ತೊಂದರೆ ಉಂಟಾಗುತ್ತದೆ.
ಶೀತ, ನೆಗಡಿ ಸಮಸ್ಯೆಗಳಿಂದ ಕೂಡ ಬರಬಹುದು!
ಇದರ ಜೊತೆಗೆ ನಮಗೆ ಸಾಮಾನ್ಯವಾಗಿ ಎದುರಾಗುವ ಶೀತ, ನೆಗಡಿ ಸಮಸ್ಯೆಗಳಿಂದ ನಮ್ಮ ಉಸಿರಾಟ ನಾಳದಲ್ಲಿ ವೈರಲ್ ಸೋಂಕು ಉಂಟಾಗಿ ಒಂದು ವೇಳೆ ವ್ಯಕ್ತಿ ಗಟ್ಟಿಯಾಗಿ ಮೂಗಿ ನಿಂದ ಗಾಳಿಯನ್ನು ಹೊರ ಹಾಕಿದಾಗ, ವೈರಸ್ ಕಣ್ಣುಗಳಿಗೆ ಹೋಗುತ್ತದೆ. ಕೆಲವರಿಗೆ ಕೋವಿಡ್ 19 ಸಮಸ್ಯೆಯಿಂದ ಕೂಡ ಕಾಂಜಂಕ್ಟಿವಿಟಿಸ್ ಆಗುತ್ತದೆ.
ರಾಸಾಯನಿಕದಿಂದ ಕಾಂಜಂಕ್ಟಿವಿಟಿಸ್
ವಾಯು ಮಾಲಿನ್ಯದಿಂದ, ಕ್ಲೋರಿನ್ ಯುಕ್ತ ನೀರಿನಿಂದ, ಹೊಗೆ ಅಥವಾ ಇನ್ನಿತರ ಅಪಾಯಕಾರಿ ರಾಸಾಯನಿಕ ಅಂಶಗಳಿಗೆ ಕಣ್ಣುಗಳು ಒಡ್ಡಿಕೊಂಡಾಗ ಉಂಟಾಗುವ ಕಾಂಜಂಕ್ಟಿವಿಟಿಸ್ ಇದಾಗಿದೆ.
ಕಾಂಜಂಕ್ಟಿವಿಟಿಸ್ ಲಕ್ಷಣಗಳು ಹೇಗಿರುತ್ತವೆ?
- ಕಣ್ಣುಗಳ ಬಿಳಿ ಭಾಗ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
- ನಿದ್ರೆ ಮಾಡಿ ಎದ್ದ ನಂತರದಲ್ಲಿ ಕಣ್ಣುಗಳಿಂದ ಗಟ್ಟಿಯಾದ ಹಳದಿ ಬಣ್ಣದ ಡಿಸ್ಚಾರ್ಜ್ ಹೊರಬರುತ್ತದೆ.
- ಕಣ್ಣೀರಿನ ಉತ್ಪತ್ತಿ ಜಾಸ್ತಿಯಾಗುತ್ತದೆ.
- ಕಣ್ಣುಗಳಿಂದ ಹಸಿರು ಅಥವಾ ಬಿಳಿ ಬಣ್ಣದ ಡಿಸ್ಚಾರ್ಜ್ ಹೊರಬರುತ್ತದೆ
- ಒಂದು ಅಥವಾ ಎರಡು ಕಣ್ಣುಗಳಲ್ಲಿ ಕೊಳೆ ಸೇರಿ ಕೊಂಡ ಅನುಭವ ಉಂಟಾಗುತ್ತದೆ
- ಕಣ್ಣು ಉರಿ ಅಥವಾ ಕೆರೆತ ಕಂಡು ಬರುತ್ತದೆ
- ಬೆಳಕಿಗೆ ಹೆಚ್ಚಿನ ಸೂಕ್ಷ್ಮತೆ ಉಂಟಾಗಿ ಕಣ್ಣುಗಳು ಮಂಜಾಗುತ್ತವೆ.
- ಕಣ್ಣು ಗುಡ್ಡೆಗಳು ಊದಿಕೊಳ್ಳುತ್ತವೆ
ಕಾಂಜಂಕ್ಟಿವಿಟಿಸ್ ಕಂಡು ಬರಲು ಕಾರಣಗಳು
- ಕಣ್ಣುಗಳ ಭಾಗದಲ್ಲಿರುವ ರಕ್ತನಾಳಗಳು ಉರಿಯುತದ ಸಮಸ್ಯೆಗೆ ಗುರಿಯಾದರೆ ಅದರಿಂದ ಕಾಂಜಂಕ್ಟಿವಿಟಿಸ್ ಉಂಟಾಗುತ್ತದೆ.
- ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಸಮಸ್ಯೆಯಿಂದ ಕಾಂಜಂಕ್ಟಿವಿಟಿಸ್ ಉಂಟಾಗುತ್ತದೆ
- ನಾವು ಬಳಸುವ ಶಾಂಪೂ, ಸ್ವಚ್ಛತೆ ರಹಿತ ಕಾಸ್ಮೆಟಿಕ್ ಉತ್ಪನ್ನಗಳು, ಕಾಂಟಾಕ್ಟ್ ಲೆನ್ಸ್, ಕ್ಲೋರಿನ್ ಯುಕ್ತ ನೀರು, ಧೂಳು, ಕೊಳೆ ಇತ್ಯಾದಿಗಳು ಕಣ್ಣುಗಳಿಗೆ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಕಣ್ಣುಗಳ ಬಣ್ಣ ನೇರಳೆ ಬಣ್ಣಕ್ಕೆ ಬದಲಾಗುತ್ತದೆ.
- ಲೈಂಗಿಕವಾಗಿ ಹರಡಬಹುದಾದ ಕಾಯಿಲೆಗಳಿಂದ ಕೂಡ ಕಣ್ಣುಗಳಿಗೆ ತೊಂದರೆ ಇರುತ್ತದೆ. ಇದರಿಂದಲೂ ಕಾಂಜಂಕ್ಟಿವಿಟಿಸ್ ಉಂಟಾಗುತ್ತದೆ.
ಮನೆಯಲ್ಲಿ ಕಾಂಜಂಕ್ಟಿವಿಟಿಸ್ ಕಾಳಜಿ ಹೇಗೆ?
- ಕಾಂಜಂಕ್ಟಿವಿಟಿಸ್ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯ ವಾಗಿರುತ್ತವೆ. ಹೀಗಾಗಿ ಸಮಸ್ಯೆ ತಾನಾಗಿಯೇ ಸರಿ ಹೋ ಗುತ್ತದೆ. ಮನೆಯಲ್ಲಿ ಕನ್ಜನ್ಕ್ಟಿವೈಟಿಸ್ ರಜೆ ಹೀಗೆ ಮಾಡಿ.
- ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ ಅದರಿಂದ ಕಣ್ಣುಗಳನ್ನು ಒರೆಸಿಕೊಳ್ಳಬೇಕು.
- ಸ್ವಲ್ಪ ಬೆಚ್ಚಗಿರುವ ಅಥವಾ ನೀರಿನಲ್ಲಿ ನೆನೆಸಿರುವ ಬಟ್ಟೆ ಯನ್ನು ಕೆಲವು ನಿಮಿಷಗಳ ಕಾಲ ಸೋಂಕಿತ ಕಣ್ಣಿನ ಮೇಲೆ ಹಾಕಿದರೆ ನೋವು ನಿವಾರಣೆ ಆಗುತ್ತದೆ. ತಂಪಾದ ಬಟ್ಟೆಯನ್ನು ಕಣ್ಣಿನ ಮೇಲೆ ಹಾಕಿದರೆ ಕಣ್ಣುಗಳ ಊರಿ ಹೋಗುತ್ತದೆ.
- ಕೈಗಳಿಂದ ಕಣ್ಣುಗಳನ್ನು ಮುಟ್ಟಬೇಡಿ
- ಯಾವುದೇ ಕಾರಣಕ್ಕೂ ನಿಮ್ಮ ಕಾಸ್ಮೆಟಿಕ್ಸ್, ಟವೆಲ್ ಇತ್ಯಾದಿಗಳನ್ನು ಇನ್ನೊಬ್ಬರಿಗೆ ಕೊಡಬೇಡಿ, ಹಾಗೆ ಬೇರೆ ಯವರ ಈ ವಸ್ತುಗಳನ್ನು ನೀವು ಕೂಡ ಉಪಯೋಗಿಸ ಬೇಡಿ.
- ನಿಮ್ಮ ಕನ್ಜನ್ಕ್ಟಿವೈಟಿಸ್ ಬಗೆಹರಿಯುವವರಿಗೆ ಕಾಂಟ್ಯಾಕ್ಟ್ ಲೆನ್ಸ್ ಅಥವಾ ಕಣ್ಣುಗಳಿಗೆ ಮೇಕಪ್ ಬಳಸುವುದು ಬೇಡ
- ಆಗಾಗ ನಿಮ್ಮ ತಲೆ ದಿಂಬಿನ ಕವರ್ ಹಾಗೂ ಬೆಡ್ ಶೀಟ್ ಬದಲಿಸಿ.
ಯಾವಾಗ ವೈದ್ಯಕೀಯ ನೆರವು ಅಗತ್ಯವಿರುತ್ತದೆ?
- ಆಗ ತಾನೆ ಹುಟ್ಟಿದ ಮಕ್ಕಳು ಅಥವಾ ಮಾರಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದೊಡ್ಡವರು ಇವರು ಗಳಿಗೆ ರೋಗನಿರೋಧಕ ಶಕ್ತಿ ದೇಹದಲ್ಲಿ ಕಡಿಮೆ ಇರುತ್ತದೆ.
- ಹಾಗಾಗಿ ಒಂದು ವೇಳೆ ಕನ್ಜನ್ಕ್ಟಿವೈಟಿಸ್ ಕಂಡು ಬಂದರೆ ತಕ್ಷಣವೇ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅಗತ್ಯವಾಗಿದೆ.
- ಇದರ ಜೊತೆಗೆ: ಮೆಡಿಕಲ್ ಶಾಪ್ ನಲ್ಲಿ ಔಷಧಿಗಳನ್ನು ತೆಗೆದುಕೊಂಡ ನಂತರ ಕಣ್ಣುಗಳಲ್ಲಿ ನಿರಂತರವಾದ ನೋವು ಇದ್ದರೆ
- ಕಣ್ಣುಗಳಿಂದ ಬಿಳಿ, ಹಳದಿ ಅಥವಾ ಹಸಿರು ಬಣ್ಣದ ಡಿಸ್ಚಾರ್ಜ್ ಇದ್ದರೆ
- ಬೆಳಕಿಗೆ ಸೂಕ್ಷ್ಮತೆ ಹೆಚ್ಚಾಗಿದ್ದರೆ
- ಕಣ್ಣುಗಳ ಡಿಸ್ಚಾರ್ಜ್ ಒರೆಸಿಕೊಂಡ ನಂತರ ಕಣ್ಣುಗ ಳಲ್ಲಿ ಮಂಜು ಆವರಿಸಿದರೆ
- 14 ದಿನಗಳು ಕಳೆದ ನಂತರವೂ ಕೂಡ ಕಣ್ಣುಗಳ ಸಮಸ್ಯೆ ಹಾಗೆ ಇದ್ದರೆ..