ಬೆಳ್ತಂಗಡಿ ತಾಲೂಕಿನಲ್ಲಿ ಗೊಲ್ಲ(ಯಾದವ) ಸಮಾಜ ಸೇವಾ ಸಂಘ ಉದ್ಘಾಟನೆ

ಶೇರ್ ಮಾಡಿ

ಬೆಳ್ತಂಗಡಿ: ದ.ಕ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘ(ರಿ) ಮಂಗಳೂರು ಇವರ ನೇತೃತ್ವದಲ್ಲಿ ಜು.30 ರಂದು ಬೆಳ್ತಂಗಡಿ ತಾಲೂಕಿನ ಕಾಶೀಪಟ್ಣದ ಆದಿಶಕ್ತಿ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕಿನ ನೂತನ ಗೊಲ್ಲ(ಯಾದವ)ಸಮಾಜ ಸೇವಾ ಸಂಘದ ವಲಯ ರಚನೆ ಮಾಡಲಾಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ದ.ಕ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ(ರಿ) ಅಧ್ಯಕ್ಷರಾದ ಟಿ. ಆರ್.ಕುಮಾರಸ್ವಾಮಿ ಉದ್ಘಾಟಿಸಿದರು. ದ.ಕ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ(ರಿ) ಗೌರವಾಧ್ಯಕ್ಷರಾದ ಯು.ಎನ್. ಪ್ರಮೋದ್ ಕುಮಾರ್ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಸಭೆಗೆ ಸಂಪೂರ್ಣ ಮಾಹಿತಿ ನೀಡಿದರು.

ವೇದಿಕೆಯಲ್ಲಿ ದ.ಕ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ(ರಿ) ಉಪಾಧ್ಯಕ್ಷರಾದ ವಿಜಯ್ ಕುಮಾರ್ ಮೂಡಬಿದ್ರೆ, ಕಾರ್ಯದರ್ಶಿ ಪ್ರಶಾಂತ್ ಸಿ. ಎಚ್,  ಖಜಾಂಚಿ ಸುಧಾಕರ್ .ಯು ಉಪಸ್ಥಿತರಿದ್ದರು.

ಕು.ನಿಸರ್ಗ, ಕು. ದೃತಿ ಪ್ರಾರ್ಥಿಸಿ, ಸುಭಾಸ್ಚಂದ್ರ ಸ್ವಾಗತಿಸಿ, ಅಭಿಷೇಕ್ ವಂದಿಸಿದರು, ವಿದ್ಯಾಲತಾ ನಿರೂಪಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ರಾಜೇಶ್ ಅಳದಂಗಡಿ, ಅಧ್ಯಕ್ಷರಾಗಿ ರತ್ನಾಕರ ರಾವ್ ಕೇಳದಕಂಬಳ, ಉಪಾಧ್ಯಕ್ಷರಾಗಿ ಜಯಚಂದ್ರ ಮುಂಡಾಜೆ ಮತ್ತು ಚಿತ್ರ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾಶೀಪಟ್ಣ, ಜೊತೆ ಕಾರ್ಯದರ್ಶಿ ಹರೀಶ್ ಗೊಲ್ಲ ಬಜಿರೆ, ಖಜಾಂಚಿ ರಮಾನಂದ ಉಜಿರೆ, ಗೌರವ ಸಲಹೆಗಾರರಾಗಿ ಲೀಲಾವತಿ ಕಾಶೀಪಟ್ಣ, ವೆಂಕಟರಮಣ, ಸುಭಾಷ್ ಚಂದ್ರ, ವಿದ್ಯಾಲತಾ ಇವರನ್ನು ಆಯ್ಕೆ ಮಾಡಲಾಯಿತು.

Leave a Reply

error: Content is protected !!