ಕಡಬ: ಮರ್ದಾಳ ಜೀವನ್ ಜ್ಯೋತಿ ವಿಶೇಷ ಶಾಲೆಯಲ್ಲಿ ಸದ್ಭಾವನ ದಿನಾಚರಣೆ

ಶೇರ್ ಮಾಡಿ

ಕಡಬ: ಮರ್ದಾಳ ಜೀವನ್ ಜ್ಯೋತಿ ವಿಶೇಷ ಶಾಲೆಯಲ್ಲಿ, ರೇ|ಫಾ|ಸಕ್ಕರಿಯಾಸ್ ನಂದಿಯಾಟ್ ಓ.ಐ.ಸಿ ಅವರ ನೇತೃತ್ವದಲ್ಲಿ ಸದ್ಭಾವನ ದಿನಾಚರಣೆಯನ್ನು ಪುತ್ತೂರು ಧರ್ಮ ಪ್ರಾಂತ್ಯದ ಬಿಷಪ್ ಗೀವರ್ಗಿಸ್ ಮೊರ್ ಮಾಕರಿಯೋಸ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸದ್ಭಾವನೆಯ ಮಹತ್ವದ ಕುರಿತಾಗಿ ಅತಿಥಿಗಳಾದ ಸೀತಾರಾಮ ಗೌಡ, ಹಾಗೂ ಸಿ.ಕೆ ಸಿದ್ದೀಕ್ ಶಾಫಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತೀ ವಂದನೀಯ ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪ ಅವರಿಗೆ ಅವರ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಜೀವನ ಜ್ಯೋತಿ ವಿಶೇಷ ಶಾಲೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.

ರೇ|ಫಾ|ಸಕ್ಕರಿಯಸ್ ನಂದೀಯಾಟ್ ಓ.ಐ.ಸಿ ಪ್ರಸ್ತಾವಿಕವಾಗಿ ಮಾತನಾಡಿದರು. ರೇ|ಫಾ|ವಿಜೋಯ್ ಓ.ಐ.ಸಿ ಸ್ವಾಗತಿಸಿ ಯೋಗ ಶಿಕ್ಷಕರಾದ ವಿಜೇಶ್ ಅವರು ವಂದಿಸಿದ ವಿ.ಜೆ ಚರಿಯಾನ್ ನಿರೂಪಿಸಿದರು.

Leave a Reply

error: Content is protected !!