ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ‘ಮಾನವ ಕಳ್ಳ ಸಾಗಾಣಿಕಾ ತಡೆ ದಿನ’ ದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಶೇರ್ ಮಾಡಿ

ಮಾನವ ಕಳ್ಳ ಸಾಗಾಣಿಕೆ ತಡೆ ದಿನದ ಅಂಗವಾಗಿ ಕಾಲೇಜಿನಲ್ಲಿ ನಡೆದಂತಹ ಜಾಗೃತಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಗುಡ್ಡಪ್ಪ ಬಲ್ಯ ಇವರು ಮಾತನಾಡುತ್ತಾ” ಮಾನವ ಕಳ್ಳ ಸಾಗಾಣಿಕೆಯು ಘೋರ, ಅಕ್ಷಮ್ಯ ಅಪರಾಧವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದೊಂದಿಗೆ ಪ್ರತಿಯೊಬ್ಬ ನಾಗರಿಕನೂ ಸಹಕರಿಸಿದರೆ, ನಮ್ಮ ದೇಶವು ಈ ಪಿಡುಗಿನಿಂದ ಮುಕ್ತವಾಗಲು ಸಾಧ್ಯವಿದೆ. ಮನುಷ್ಯರನ್ನು ಮನುಷ್ಯರೇ ಕಳ್ಳತನ ಮಾಡುವುದು ಮತ್ತು ಇದರಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವುದು ಅತ್ಯಂತ ಆಘಾತಕಾರಿಯಾದ ಸಂಗತಿಯಾಗಿದೆ. ಮಹಿಳೆಯರನ್ನು, ಮಕ್ಕಳನ್ನು ಹಳ್ಳ ದಾರಿಯ ಮೂಲಕ ಸಾಗಾಟ ಮಾಡಿ ಭಯೋತ್ಪಾದನೆ ಮುಂತಾದ ಕೆಟ್ಟ ಕೆಲಸಗಳಿಗೆ ಬಳಸುವುದು ಅತ್ಯಂತ ಹೇಯ ಕಾರ್ಯವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಸ್ವಯಂ ಜಾಗೃತಿಯನ್ನ ಈ ಕುರಿತಾಗಿ ಮೂಡಿಸಿಕೊಳ್ಳಬೇಕು ಅದಲ್ಲದೆ ಇತರರಿಗೂ ಜಾಗೃತಿಯನ್ನು ಮೂಡಿಸಬೇಕು, ಆ ಮೂಲಕ ಸಮಾಜವನ್ನು ರಕ್ಷಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗಣೇಶ್ ಕೆ, ಶ್ರೀಮತಿ ತನುಜಾ, ಶ್ರೀಮತಿ ಮಲ್ಲಿಕಾ, ಏನ್ ಎಸ್ ಎಸ್ ಘಟಕದ ನಾಯಕ ಧನರಾಜ್, ನಾಯಕಿ ಸಮೀಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್ ಎಸ್ ಎಸ್ ಘಟಕದ ಸಂಯೋಜನಾಧಿಕಾರಿ ತಿಲಕಾಕ್ಷ ಇವರು ಕಾರ್ಯಕ್ರಮವನ್ನು ಸಂಯೋಜಿಸಿ ಸ್ವಾಗತ ಭಾಷಣವನ್ನು ಮಾಡಿದರು. ಸಹ ಸಂಯೋಜನಾಧಿಕಾರಿ ಕೀರ್ತನ್ ವಂದನಾರ್ಪಣೆಗೈದರು.

Leave a Reply

error: Content is protected !!