ಗಂಡಿಬಾಗಿಲು ಸೈಂಟ್‌ ಥೋಮಸ್‌ ಚರ್ಚ್‌, ಗ್ರೋಟ್ಟೊದಲ್ಲಿ ಕಾಣಿಕೆ ಡಬ್ಬಿ ಕಳ್ಳತನ

ಶೇರ್ ಮಾಡಿ

ಬೆಳ್ತಂಗಡಿ: ನೆರಿಯ ಗ್ರಾಮದ ಗಂಡಿಬಾಗಿಲು ಸಂತ ಥೋಮಸರ ದೇವಾಲಯ ಮತ್ತು ಸಂತ ಮರಿಯಮ್ಮ ಗ್ರೊಟ್ಟೋದ ಕಾಣಿಕೆ ಡಬ್ಬಿಯನ್ನು ಮಂಗಳವಾರ ರಾತ್ರಿ ಕಳ್ಳರು ಹಾನಿಯೆಸಗಿ ಕಳ್ಳತನಗೈದಿದ್ದಾರೆ.

ಬುಧವಾರ ಬೆಳಗ್ಗೆ ವಿಚಾರ ಬಹಿರಂಗವಾಗಿದೆ. ಚರ್ಚ್‌ನ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿಯಲಾಗಿದ್ದು ಅದರಲ್ಲಿದ್ದ ನಗದನ್ನು ಅಪಹರಿಸಲಾಗಿದೆ. ಕಾಣಿಕೆ ಡಬ್ಬಿಗೆ ಹಾನಿಯಾಗಿದೆ. ಇಲ್ಲಿಂದ ಅಣತಿ ದೂರದ ಆಲಂಗಾಯಿ ತಿರುವು ರಸ್ತೆ ಬಳಿ ಇರುವ ಸಂತ ಮರಿಯಮ್ಮರ ಗ್ರೋಟ್ಟೋ ಬಳಿಯ ಕಾಣಿಕೆ ಡಬ್ಬಿಯನ್ನೇ ಕಳ್ಳರು ಅಪಹರಿಸಿದ್ದಾರೆ.

ಚರ್ಚ್‌ನ ಧರ್ಮಗುರುಗಳು ಕಾರ್ಯನಿಮಿತ್ತ ರಾತ್ರಿ ಧರ್ಮಪ್ರಾಂತಕ್ಕೆ ತೆರಳಿದ್ದರು. ಬುಧವಾರ ಬೆಳಗ್ಗೆ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಚರ್ಚ್‌ನ ಆಡಳಿತ ಮಂಡಳಿ ಕಡೆಯಿಂದ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ. ಅವರು ಸ್ಥಳಕ್ಕೆ ಬಂದು ಮಹಜರು ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.

Leave a Reply

error: Content is protected !!