ನೂಜಿಬಾಳ್ತಿಲ: ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭ ನೆರವೇರಿತು. ಶಾಲಾ ನಾಯಕಿಯಾಗಿ ಕುಮಾರಿ ಸೌಪರ್ಣಿಕ, ಉಪನಾಯಕನಾಗಿ ಬಾಲಕೃಷ್ಣ, ವಿದ್ಯಾರ್ಥಿನಿ ಪ್ರತಿನಿಧಿಯಾಗಿ ವಂಶಿತ, ವಿದ್ಯಾರ್ಥಿನಿ ಉಪ ಪ್ರತಿನಿಧಿಯಾಗಿ ನಿಶ ಜಿ ಎಸ್ ಹಾಗೂ ಗೃಹಮಂತ್ರಿ, ಕ್ರೀಡಾ ಮಂತ್ರಿ, ಆರೋಗ್ಯ ಮಂತ್ರಿ, ವಾರ್ತಾ ಮಂತ್ರಿ, ಸಾಂಸ್ಕೃತಿಕ ಮಂತ್ರಿಗಳಾಗಿ 10 ವಿದ್ಯಾರ್ಥಿಗಳು ಪ್ರಮಾಣವಚನ ಮಾಡಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಡಬ ಠಾಣಾ ಅಧಿಕಾರಿ ಆಂಜನೇಯ ರೆಡ್ಡಿ ಮಂತ್ರಿಗಳಿಗೆ ಪದವಿ ಪ್ರಧಾನ ಮಾಡಿ ಶುಭ ಹಾರೈಸಿದರು. ಸ್ಥಳೀಯ ಸಂಚಾಲಕರಾದ ರೆ.ಫಾ.ವಿಜೋಯ ವರ್ಗೀಸ್ ಓ ಐ ಸಿ ಹೊಸ ಮಂತ್ರಿಗಳಿಗೆ ಶುಭ ಕೋರಿದರು.
ರೆ.ಫಾ.ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಸ್ಥೆಯಲ್ಲಿ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಶುಭ ಹಾರೈಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಗೌಡ ಗೋಲ್ತಿಮಾರು ಇವರು ಮಂತ್ರಿಮಂಡಲಕ್ಕೆ ಶುಭ ಕೋರಿದರು. ಮುಖ್ಯ ಗುರುಗಳಾದ ಥಾಮಸ್ ಏ.ಕೆ ಸ್ವಾಗತಿಸಿ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಪ್ರಮಾಣ ವಚನ ಭೋಧಿಸಿದರು.
ಶ್ರೀಮತಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಪೋಷಕರು, ಬೋಧಕ ಬೋಧಕೇತರ ವೃಂದ ಉಪಸ್ಥಿತರಿದ್ದರು.