ನೆಲ್ಯಾಡಿ: ಇಲ್ಲಿನ ದೋಂತಿಲ ಸಮೀಪದ ತೋಟ ಎಂಬಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪದ್ಮಯ್ಯ ಗೌಡ ಎಂಬವರ ಪತ್ನಿ ಸೇಸಮ್ಮ (ದೇವಕಿ)(60ವ) ಹೃದಯಾಘಾತದಿಂದ ಅ. 5 ರಂದು ನಿಧನ.
ಪತಿ ಪದ್ಮಯ ಗೌಡರಿಗೆ ಆ.5ರಂದು ಬೆಳಗ್ಗೆ ತೋಟದಲ್ಲಿ ವಿಷದ ಹಾವೊಂದು ಕಚ್ಚಿದ ಪರಿಣಾಮ ಅವರನ್ನು ಮಂಗಳೂರಿನ ಕೊಂಡೊಯ್ಯ ಲಾಗಿದ್ದು. ಈ ವಿಷಯವನ್ನು ತಿಳಿದ ಪತ್ನಿ ಸೇಸಮ್ಮ ಅವರು ಆಘಾತಗೊಂಡು ಹೃದಯಾಘಾತದಿಂದ ನಿಧನ ಹೊಂದಿದರು.
ಪದ್ಮಯ ಗೌಡ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತಿ ಹಾಗೂ 3 ಗಂಡು, 1 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.