ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ 82ನೇ ಪುಣ್ಯ ಸ್ಮರಣೆ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವಕವಿ ರವೀಂದ್ರನಾಥ್ ಟ್ಯಾಗೋರ್ ಅವರ 82ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅರಂಭದಲ್ಲಿ ವಿದ್ಯಾ ಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿಗಳಾದ ಅಬ್ರಹಾಂ ವರ್ಗಿಸ್, ಸಂಸ್ಥೆಯ ಸಂಚಾಲಕರಾಗಿರುವ ರೆ|ಫಾ|ನೋಮಿಸ್ ಕುರಿಯಾಕೋಸ್, ಮುಖ್ಯ ಅತಿಥಿಗಳಾಗಿರುವ ಶ್ರೀಮತಿ ಪ್ರಿಯಾ ಆಗ್ನೆಸ್, ಕಾಲೇಜಿನ ಪ್ರಾಂಶುಪಾಲರಾದ ಏಲಿಯಸ್ ಎಂ ಕೆ, ಕನ್ನಡ ಮಾಧ್ಯಮದ ಮುಖ್ಯ ಗುರುಗಳಾಗಿರುವ ತೋಮಸ್ ಎಂ.ಐ, ಇಂಗ್ಲಿಷ್ ಮಾಧ್ಯಮದ ಮುಖ್ಯ ಗುರುಗಳಾದ ಹರಿಪ್ರಸಾದ್ ಕೆ, ಕನ್ನಡ ಮಾಧ್ಯಮದ ನಿವೃತ್ತ ಮುಖ್ಯ ಗುರುಗಳಾಗಿರುವ ರವೀಂದ್ರ ಟಿ ಅವರು ಟಾಗೋರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಮೂರು ವಿಭಾಗಗಳ ವಿದ್ಯಾರ್ಥಿಗಳಿಂದ ಕವಿ ರವೀಂದ್ರನಾಥ್ ಟಾಗೋರ್ ಅವರ ಕುರಿತಾಗಿ ಭಾಷಣ ಹಾಗೂ ಸಮೂಹ ಗೀತೆಯ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪ್ರಿಯಾ ಆಗ್ನೆಸ್ ಮಾತನಾಡಿ ಕವಿ ರವೀಂದ್ರರ ಆದರ್ಶಗಳು ಪೋಷಕರು ಮತ್ತು ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಒಬ್ಬ ವಿದ್ಯಾರ್ಥಿ ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿಗಳಾದ ಅಬ್ರಹಾಂ ವರ್ಗಿಸ್ ಮಾತನಾಡಿ ಮಿಂಚು ಹುಳ ತಾನು ಮಿನುಗಿ ಜಗತ್ತಿಗೆ ಬೆಳಕು ಕೊಟ್ಟಂತೆ ಕವಿ ರವೀಂದ್ರರ ಸಾಹಿತ್ಯ ಮತ್ತು ಬದುಕು ಜಗತ್ತಿಗೆ ಬೆಳಕನ್ನು ನೀಡಿದೆ ಎಂದರು.
ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ರೆ|ಫಾ|ನೋಮಿಸ್ ಕುರಿಯಾಕೋಸ್ ಅವರು ಮಾತನಾಡಿ. ರವೀಂದ್ರರು ಪ್ರಪಂಚಕ್ಕೆ ಪರಿಚಯಿಸಿದ ಪ್ರೀತಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂದರು.

ಕಾರ್ಯಕ್ರಮದಲ್ಲಿ ಮೂರು ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮದ ಮುಖ್ಯ ಗುರುಗಳಾದ ಎಂ.ಐ ತೋಮಸ್ ಅವರು ಸ್ವಾಗತಿಸಿ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಹರಿಪ್ರಸಾದ್.ಕೆ ವಂದಿಸಿದರು. ಕಾಲೇಜಿನ ಇತಿಹಾಸ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

error: Content is protected !!