ಬೆಂಗಳೂರಿನ ಮಿಂಚುಳ್ಳಿ, ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್ ಪುತ್ರಿ ವೈಭವಿ ಜಗದೀಶ್ ಹಾಟ್ ಅವತಾರದಲ್ಲಿ ದರ್ಶನ

ಶೇರ್ ಮಾಡಿ

ಸ್ಯಾಂಡಲ್‌ವುಡ್ ಬ್ಯೂಟಿ ವೈಭವಿ ಜಗದೀಶ್ ಆಗಾಗ ಹಾಟ್ ಅವತಾರದಲ್ಲಿ ದರ್ಶನ ಕೊಡುತ್ತಾರೆ. ಈಗ ಮತ್ತೆ ಬಿಕಿನಿ ಫೋಟೋ ಶೇರ್ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ‘ಯಾನ’ ನಾಯಕಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿವೆ.

ಜೈಜಗದೀಶ್ ಪುತ್ರಿ ವೈಭವಿ ಸದ್ಯ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ. ಸದಾ ಒಂದಲ್ಲಾ ಒಂದು ಹಾಟ್ ಫೋಟೋ ಶೇರ್ ಮಾಡುವ ಮೂಲಕ ಗಂಡ್ ಹೈಕ್ಳ ತಲೆ ಕೆಡಿಸಿದ್ದಾರೆ. ಬಿಳಿ ಬಣ್ಣದ ಬಿಕಿನಿ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನೀರಿನ ಮಧ್ಯೆ ನಿಂತು ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ.

ಯಾನ, ಕಾಮಣ್ಣನ ಮಕ್ಕಳು ಸೇರಿದಂತೆ ಹಲವು ಪ್ರಾಜೆಕ್ಟ್‌ನಲ್ಲಿ ವೈಭವಿ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್ ಮಗಳಿಗೆ ಚಂದನವನದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗುತ್ತಿಲ್ಲ. ತಂದೆ- ತಾಯಿಯಂತೆಯೇ ಬೆಳ್ಳಿಪರದೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸ್ಟಾರ್ ಕಿಡ್ ಅನ್ನೋದು ಬಿಟ್ಟರೇ ಪ್ರತಿಭೆಯಲ್ಲಿ ವೈಭವಿ ಯಾರಿಗಿಂತ ಕಡಿಮೆಯಿಲ್ಲ. ಪ್ರತಿಭೆಯ ಜೊತೆ ಬ್ಯೂಟಿ ಇರುವ ಈ ಸುಂದರಿಗೆ ಸೂಕ್ತ ಅವಕಾಶ ಬೇಕಿದೆ. ಸದ್ಯ ನಟನೆಯಿಂದ ವೈಭವಿ ದೂರವಿದ್ದಾರೆ. ಉತ್ತಮ ಅವಕಾಶ, ಕಥೆ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತಾರಾ ಕಾಯಬೇಕಿದೆ.

Leave a Reply

error: Content is protected !!