ಲೋಕಾರ್ಪಣೆಗೆ ಸಿದ್ದಗೊಂಡಿದೆ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ, ನೆಲ್ಯಾಡಿ ಸಂಘಟನೆಯ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣ

ಶೇರ್ ಮಾಡಿ

ನೆಲ್ಯಾಡಿಯಿಂದ ಬಲ್ಯ ಮೂಲಕ ಕಡಬಕ್ಕೆ ಪ್ರಯಾಣಿಸುವ ಮುಖ್ಯ ರಸ್ತೆಯ ರಾಮನಗರ ಅಂಗನವಾಡಿಯ ಹತ್ತಿರ ವಾಹನಕ್ಕಾಗಿ ಕಾಯುವವರು ರಸ್ತೆಯಬದಿಯಲ್ಲಿ ನಿಲ್ಲಬೇಕಿದ್ದ ಅನಿವಾರ್ಯ ಪರಿಸ್ಥಿತಿಯಿತ್ತು,ಜೋರು ಮಳೆಯ ಸಂದರ್ಭ, ಬಿಸಿಲಿಗೆ ರಸ್ತೆಯ ಬದಿಯಲ್ಲಿ ನಿಲ್ಲುವುದು ಕಷ್ಟದ ಕೆಲಸವಾಗಿತ್ತು, 

ಶಾಲೆಗೆ ಹೋಗುವ ಮಕ್ಕಳಿಗೆ ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತಿತ್ತು .ಹಾಗಾಗಿ ಈ ಸಮಸ್ಯೆಯನ್ನು ಮನಗಂಡು, ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ ಸಂಘಟನೆ ದಾನಿಗಳ ಸಹಕಾರದಿಂದ ಸುಸಜ್ಜಿತವಾದ ಪ್ರಯಾಣಿಕರ ತಂಗುದಾಣವನ್ನು  ನಿರ್ಮಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ 

ದಿನಾಂಕ 15.08.2023 ನೇ ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಪ್ರಯಾಣಿಕರ ತಂಗುದಾಣ ಉದ್ಘಾಟನೆಯಾಗಲಿದೆ.

Leave a Reply

error: Content is protected !!