ನಮಸ್ತೆ ಹೇಳುವಾಗ ಉಂಟಾಗುವ ಆಕುಂಚನ ಶಕ್ತಿ ಹಾಯ್ ಬಾಯ್ ಗಳಲ್ಲಿ ಇಲ್ಲ

ಶೇರ್ ಮಾಡಿ

ಪಟ್ಟೂರು: ನಾವು ತೊಡುವ ಬಳೆ, ಮುಡಿಯುವ ಹೂವು, ಧರಿಸುವ ತಿಲಕ ಎಲ್ಲದಕ್ಕೂ ನಮ್ಮ ಸಂಸ್ಕೃತಿಯಲ್ಲಿ ವಿಶೇಷವಾದ ಅರ್ಥವನ್ನು ನೀಡಲಾಗಿದೆ. ಎರಡು ಕರಗಳನ್ನು ಜೋಡಿಸಿ ನಮಸ್ತೆ ಹೇಳುವಾಗ ಉಂಟಾಗುವ ಆಕುಂಚನ ಶಕ್ತಿ ಹಾಯ್ ಬಾಯ್ ಗಳಲ್ಲಿ ಇಲ್ಲ ಇಂದು ನಿವೃತ್ತ ಅಧ್ಯಾಪಕ ಕುಂಞಪ್ಪ ಗೌಡ ನುಡಿದರು.
ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ‍್ಯ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಕಿಲೋಮೀಟರ್‌ಗಟ್ಟಲೆ ವಿದ್ಯಾರ್ಥಿಗಳು ನಡೆಯುತ್ತಾ ಶಾಲೆಯನ್ನು ತಲುಪುತ್ತಿದ್ದಾಗ ಅನೇಕ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರಿಂದು ಮಕ್ಕಳು ಬಸ್ಸು ಕಾರು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಬರುತ್ತಿದ್ದು ಈ ಅತಿಯಾದ ಮುದ್ದಿನಿಂದಾಗಿ ಮಕ್ಕಳು ಸ್ವಂತಿಕೆ ಕಳೆದುಕೊಳ್ಳುತ್ತಿದ್ದಾರೆ. ನಡೆದುಕೊಂಡು ಬರುವಂತಹ ಕಾಲದಲ್ಲಿ ಕಾಡು ನದಿ, ಗುಡ್ಡಗಳ ಪರಿಚಯ ಮಕ್ಕಳಿಗೆ ಸಿಗುತ್ತಿದ್ದು ಅವರು ಭವಿಷ್ಯದಲ್ಲಿ ಸ್ವತಂತ್ರವಾಗಿ ಬದುಕಲು ಶಕ್ತಿ ನೀಡುತ್ತಿತ್ತು ಎಂದರು.
ಧ್ವಜಾರೋಹಣಗೈದು ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಸೀನರಾಗಿದ್ದ ಉಜಿರೆಯ ಗಣೇಶ್ ಪ್ರಸಾದ್ ಡ್ರೈವಿಂಗ್ ಸ್ಕೂಲ್‌ನ ಮಾಲಕ ರಾಮದಾಸ್ ಭಂಡಾರ್ಕರ್ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಭರದಲ್ಲಿ ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ. ಶ್ರೀರಾಮ ಶಾಲೆಗಳಿಂದಾಗಿ ನಮ್ಮ ಸಂಸ್ಕೃತಿ, ಪರಂಪರೆ ಸನಾತನ ಧರ್ಮ ಇನ್ನೂ ಕೂಡ ಜೀವಂತವಾಗಿದೆ. ಭವ್ಯ ರಾಷ್ಟ್ರದ ಮುಂದಿನ ಪ್ರಜೆಗಳಿಗೆ ಈ ರೀತಿಯ ಶಿಕ್ಷಣ ಸಿಕ್ಕಾಗ ರಾಷ್ಟ್ರ ಸದೃಢವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಶಾಲಾ ಆಡಳಿತ ಸಮಿತಿಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕೋಶಾಧಿಕಾರಿ ಗಣೇಶ್ ಕೆ. ಹಿತ್ತಿಲು, ಸದಸ್ಯ ಕಿರಣ್ ಕೊಡೆಂಚಡ್ಕ, ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯರು ಹುಟ್ಟುಹಬ್ಬ ಆಚರಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಅಕ್ಷತೆ ಹಾಕಿ, ಸಿಹಿ ನೀಡಿರು. ವಿದ್ಯಾರ್ಥಿಗಳು ದೇವರಿಗೆ ಪುಷ್ಪಾರ್ಚನೆ ಮಾಡಿ ಶ್ರದ್ದಾ ನಿಧಿ ಅರ್ಪಿಸಿ, ಅತಿಥಿಗಳಿಂದ ತಿಲಕ ಧಾರಣೆ ಮಾಡಿಕೊಂಡರು. ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ತಿಲಕ್ ಸ್ವಾಗತಿಸಿ, ಧನ್ಯ ವಂದಿಸಿದರು, ಸಮರ್ಥ ವಿನಯ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!