ಗೋಳಿತಟ್ಟು ಸ ಉ ಹಿ ಪ್ರಾ ಶಾಲೆ ಇಲ್ಲಿ 76 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಜರುಗಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋಪಾಲ ಗೌಡರು ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಶುಭ ಹಾರೈಸಿದರು.
ನಂತರ ಗೋಳಿತಟ್ಟು ಪೇಟೆಯನ್ನು ಹಾದು ಗೋಳಿತಟ್ಟು ಮಸೀದಿ ವರೆಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ವಿದ್ಯಾರ್ಥಿಗಳ ಮೆರವಣಿಗೆ ಸಾಗಿತು. ಊರ ವಿದ್ಯಾಭಿಮಾನಿಗಳು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜನಾರ್ದನ ಗೌಡ ಸಭಾ ಅಧ್ಯಕ್ಷತೆ ವಹಿಸಿದ್ದರು. ದುರ್ಗಾ ಬೀಡಿ ಮಾಲಕರಾದ ಕೇಶವ ಪೂಜಾರಿ ದೇಶಭಕ್ತಿ ಗೀತೆ ಹಾಡಿ ಭಾಷಣ ಮಾಡಿದರು. ಗ್ರಾ.ಪಂ ಸದಸ್ಯ ಬಾಬು ಪೂಜಾರಿ ಶುಭ ಹಾರೈಸಿದರು.
ಗೋಳಿತಟ್ಟು ಶಾಲೆಯು 2025ನೇ ವರ್ಷದಲ್ಲಿ ಶತಮಾನೋತ್ಸವ ಆಚರಿಸಲಿದ್ದು ಅದರ ರೂಪು ರೇಷೆಗಳನ್ನು ಹಾಕುವ ಬಗ್ಗೆ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಬಿ.ಎಂ ಶತಮಾನೋತ್ಸವದ ಪೂರ್ವಭಾವಿ ಸಭೆಯ ಕುರಿತು ವಿಜ್ಞಾಪನೆಯನ್ನು ವಾಚಿಸಿದರು. ಹಿರಿಯ ವಿದ್ಯಾರ್ಥಿ ವೆಂಕಪ್ಪ ಗೌಡ ಡೆಬ್ಬೇಲಿ ಶತಮಾನೋತ್ಸವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಳಿತಟ್ಟು ಮಸೀದಿಯ ಅಧ್ಯಕ್ಷರಾದ ಆರೀಫ್ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ನಾಸಿರ್ ಸಮರಗುಂಡಿ, ಕುಶಾಲಪ್ಪ ಗೌಡ ಅನಿಲ, ಶೇಖರ್ ಗೌಡ ಅನಿಲ ಭಾಗ್, ನೋಣಯ್ಯ ಗೌಡ ಅನಿಲ, ಬಶೀರ್, ಆಯಿಷಾ,ಪುರುಷೋತ್ತಮ ಗೌಡ ಕುದ್ಕೊಳಿ ಹಾಗೂ ಅನೇಕ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಆಟೋ ಚಾಲಕ ಮಾಲಕರ ಸಂಘದ ಸದಸ್ಯರು, ಗೋಳಿತಟ್ಟು ವರ್ತಕರು, ಒಡಿಯೂರು ಕ್ಷೇತ್ರದ ಒಕ್ಕೂಟದ ಸದಸ್ಯರು, ಹಿರಿಯ ಕಿರಿಯ ವಿದ್ಯಾರ್ಥಿಗಳು, ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶೀನಪ್ಪ ನಾಯ್ಕ್ ಎಸ್, ಅಂಗನವಾಡಿ ಸಿಬ್ಬಂದಿ ವರ್ಗ, ಅಕ್ಷರ ದಾಸೋಹ ಸಿಬ್ಬಂದಿ ವರ್ಗ ದವರು ಸಹಕರಿಸಿದರು .
ಶಾಲಾ ದೈ.ಶಿ.ಶಿಕ್ಷಕ ಜೋನ್ ಕೆ ಪಿ ಧ್ವಜದ ನಿರ್ವಹಣೆ ಮಾಡಿದರು. ಸ ಶಿಕ್ಷಕಿ ಶ್ರೀಮತಿ ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಶ್ರೀಮತಿ ಯಶಸ್ವಿನಿ ಜಿ ಕೆ ಸರ್ವ ರೀತಿಯ ಸಹಕಾರ ನೀಡಿದರು. ಸ.ಶಿಕ್ಷಕ ಅಬ್ದುಲ್ ಲತೀಫ್ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು.