ಕಡಬ: ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜು ಸ್ವಾತಂತ್ರ್ಯ ದಿನಾಚರಣೆ

ಶೇರ್ ಮಾಡಿ

ಕಡಬ: ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜು ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ.ಅನಿಲ್ ಕುಮಾರ್ ಈಶೋ ರವರು ನಾಸಿಕ್ ಬ್ಯಾಂಡ್ ಉದ್ಘಾಟಿಸಿದರು ನಂತರ ನಾಸಿಕ್ ಬ್ಯಾಂಡಿನೊಂದಿಗೆ ಅತಿಥಿಗಳನ್ನು ಧ್ವಜರೋಹಣ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.
ಧ್ವಜಾರೋಹಣವನ್ನು ನಿವೃತ್ತ ಸೈನಿಕರಾದ ತೋಮಸ್ ಸಿ ರವರು ನೆರವೇರಿಸಿದರು
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಅನಿಲ್ ಕುಮಾರ್ ಈಶೋ ನಿವೃತ್ತ ಸೈನಿಕರಾದ ಥಾಮಸ್ ಸಿ, ಶಾಲಾ ಫಾದರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನಿವೃತ್ತ ಸೈನಿಕ ಥಾಮಸ್ ರವರು ಮಾತನಾಡಿ ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ. ಅನಿಲ್ ಈಶೋರವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಶುಭ ನುಡಿಗಳನ್ನಾಡಿದರು. ನಿವೃತ್ತ ಸೈನಿಕರಾದ ಥಾಮಸ್ ಸಿ ರವರು ಶಾಲಾ ಮಕ್ಕಳ ಶಿಕ್ಷಣ ಹಾಗೂ ಕ್ರೀಡಾ ಸ್ಪೂರ್ತಿಗಾಗಿ ರೂ 10,000ವನ್ನು ನೀಡಿದರು.
ಶಾಲೆಗೆ ನಾಸಿಕ್ ಬ್ಯಾಂಡ್ ಅನ್ನು ಕೊಡುಗೆಯಾಗಿ ಕೊಟ್ಟ ಸುಬ್ರಹ್ಮಣ್ಯ ಭಟ್ ಶಾಲಾ ಕನ್ನಡ ಅಧ್ಯಾಪಕರಿಗೆ ಹಾಗೂ ಅತಿಥಿಗಳಿಗೆ ಶಾಲಾ ಫಾದರ್ ಅವರು ಸ್ಮರಣಿಕೆ ಕೊಟ್ಟು ಗೌರವಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ರವರು ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮವು ಮುಂದುವರೆಯಿತು.
ಶಾಲಾ ನಾಯಕಿ ಸೌಪರ್ಣಿಕ ರವರು ಸ್ವಾಗತಿಸಿದರು. ನಿರೂಪಣೆಯನ್ನು ಶಾಲಾ ಸಾಂಸ್ಕೃತಿಕ ಮಂತ್ರಿಯಾದ ಸುಷ್ಮಾ ರವರು ನೆರವೇರಿಸಿದರು.
ಶಾಲಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

Leave a Reply

error: Content is protected !!