ನೆಲ್ಯಾಡಿ: ಕಳ್ಳರ ಕೈಚಳಕ; 2 ಲಕ್ಷ ಮೌಲ್ಯದ ಹಣ,15 ಲಕ್ಷದ ವಸ್ತುಗಳೊಂದಿಗೆ ಪರಾರಿ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಕೆ.ಜೆ.ಕೆ ಟವರ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಜಗದಾಂಬಾ ಏಜೆನ್ಸಿಸ್ ಎಲೆಕ್ಟ್ರಿಕಲ್ ಅಂಡ್ ಪ್ಲಂಬಿಂಗ್ ಹಾರ್ಡವೇರ್ ಮಳಿಗೆಗೆ ಅ.17ರ ರಾತ್ರಿ ಕಳ್ಳರು ನುಗ್ಗಿದ ಘಟನೆ ನಡೆದಿದೆ.

ಮನೋಹರ್ ಸಿಂಗ್ ಎಂಬವರ ಮಾಲಕತ್ವದ ಈ ಅಂಗಡಿಯಾಗಿದ್ದು, ಸುಮಾರು 2 ಲಕ್ಷ ಮೌಲ್ಯದ ಹಣ ಹಾಗೂ ಅಂದಾಜು 15 ಲಕ್ಷದ ವಸ್ತುಗಳು ಕಳವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಅಂಗಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದ ಡಿವಿಯರ್ ಬಾಕ್ಸ್ ಅನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ.
ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರುಕ್ಮಯ ನಾಯ್ಕ್, ನೆಲ್ಯಾಡಿ ಹೊರಠಾಣೆಯ ಕುಶಾಲಪ್ಪ ನಾಯ್ಕ್, ಪ್ರತಾಪ್, ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಂಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಾಗಿದೆ.

ನೆಲ್ಯಾಡಿ ಹೂರ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ
ನೆಲ್ಯಾಡಿ ಹೂರ ಠಾಣೆಯಲ್ಲಿ ಬೆರಳೆಣಿಕೆಯ ಪೊಲೀಸ್ ಸಿಬ್ಬಂದಿಗಳು ಇದ್ದು, ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಅನೇಕ ಅಪಘಾತಗಳು, ದರೋಡೆಗಳು ನಡೆಯುತ್ತಿರುವುದರಿಂದ. ಸಂಬಂಧಪಟ್ಟವರು ಗಮನ ಹರಿಸಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

NESARA|| WhatsApp ||GROUPS

   
                          

 

  
                                                     

 

💢ಜಾಹೀರಾತು💢

 

Leave a Reply

error: Content is protected !!