ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಭಾವೈಕ್ಯ ಕಾವ್ಯ ಸಿರಿ ಪ್ರಶಸ್ತಿ’

ಶೇರ್ ಮಾಡಿ

ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ. ವತಿಯಿಂದ ಮಂಗಳೂರಿನ ಮರಿಯಾ ಜಯಂತಿ ಸಭಾಭವನದಲ್ಲಿ ಭಾವೈಕ್ಯ ಸಮ್ಮಿಲನ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಜರಗಿತು

ರಾಜ್ಯದ ವಿವಿಧ ಮೂಲೆಗಳಿಂದ ಸಾಹಿತ್ಯ ದಿಗ್ಗಜರು ಆಗಮಿಸಿದ್ದು ಈ ವೇಳೆ ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಭಾವೈಕ್ಯ ಕಾವ್ಯ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು
ಇವರು ಕಡಬ ತಾಲೂಕು ನೂಜಿಬಾಳ್ತಿಲ, ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಹಾಗು ಮಂಜುಳಾ ರವರ ಸುಪುತ್ರರಾಗಿರುತ್ತಾರೆ.

ಯುವ ಸಾಹಿತಿ, ವಾಗ್ಮಿ, ಅಭಿನಯಕಾರ, ನಿರೂಪಕ, ನಾಟಕರಚನೆಗಾರರಾಗಿ ಗುರುತಿಸಿಕೊಂಡಿದ್ದು ಮೂರು ಕವನ ಸಂಕಲನವನ್ನು ಬರೆದು-ಬಿಡುಗಡೆಗೊಳಿಸಿರುವ ಇವರು ಪ್ರಸ್ತುತ ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದು, ರಾಜ್ಯ- ಅಂತರ್ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಈ ಮೊದಲು ಬಹುಮಾನಿತರಾಗಿದ್ದು ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

NESARA|| WhatsApp ||GROUPS

   
                          

 

  
                                                     

 

💢ಜಾಹೀರಾತು💢

 

Leave a Reply

error: Content is protected !!