ಪ್ರಚಾರಕ್ಕಾಗಿ ಸೀರೆ ಸೆರಗು ಬಿಚ್ಚಿದ ಕನ್ನಡತಿ ನೇಹಾ ಶೆಟ್ಟಿ- ನಟಿಯ ನಡೆಗೆ ನೆಟ್ಟಿಗರು ಗರಂ

ಶೇರ್ ಮಾಡಿ

ಕಡಬ ವಲಯ ಮಟ್ಟದ ಪ್ರೈಮರಿ ವಿಭಾಗದ ಶಟಲ್ ಪಂದ್ಯಾಟವು ಆಗಸ್ಟ್ 17ರಂದು ಕುಲ್ಕುಂದದಲ್ಲಿ ಜರಗಿತು.
ಇದರ ಬಾಲಕರ ವಿಭಾಗದಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಜೋತ್ ಎನ್.ಕೆ.(7ನೆಯ ತರಗತಿ), ನಮನ್(7ನೆಯತರಗತಿ) ಮತ್ತು ಸ್ವಸ್ತಿಕ ರಾಮ ಯು(6ನೆಯ ತರಗತಿ) ಇವರ ತಂಡವು ಪ್ರಥಮ ಬಹುಮಾನಗಳಿಸಿದೆ. ಇವರು ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

‘ಖುಷಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಜಯ್ ಶರ್ಟ್ ಬಿಚ್ಚಿ ಸಮಂತಾಜೊತೆ ಡ್ಯಾನ್ಸ್ ಮಾಡಿರೋದು ಸಖತ್ ಟ್ರೋಲ್ ಆಗುತ್ತಿದೆ. ಈ ಬೆನ್ನಲ್ಲೇ ಕನ್ನಡದ ‘ಮುಂಗಾರು ಮಳೆ 2’ ನಟಿ ವೇದಿಕೆಯ ಮೇಲೆ ಸೀರೆ ಸೆರಗು ಬಿಚ್ಚುವ ಮೂಲಕ ಟ್ರೋಲ್ ಆಗಿದ್ದಾರೆ. ನೇಹಾ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಒಂದು ಸಿನಿಮಾ ರಿಲೀಸ್ ಆಗ್ತಿದೆ ಅಂದರೆ ಆ ಚಿತ್ರವನ್ನ ಬಗೆ ಬಗೆಯ ರೀತಿಯಲ್ಲಿ ಮಾರ್ಕೆಟಿಂಗ್ ಮಾಡುತ್ತಾರೆ. ಇತ್ತೀಚೆಗೆ ಎಲ್ಲ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ಡಬ್ ಆಗುತ್ತಿರುವುದಿಂದ ಯಾವ ಸಿನಿಮಾ ನೋಡಬೇಕೆಂಬ ಗೊಂದಲ ಪ್ರೇಕ್ಷಕರಲ್ಲಿ ಮೂಡಿದೆ. ಅಷ್ಟೊಂದು ಸಿನಿಮಾಗಳು ಪ್ರತಿ ವಾರ ತೆರೆ ಕಾಣುತ್ತವೆ. ಹೀಗಾಗಿ ಜನರನ್ನು ಸೆಳೆಯಲು ಚಿತ್ರತಂಡಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಕೆಲವೊಮ್ಮೆ ಇಂತಹ ಪ್ರಯತ್ನ ವಿವಾದಕ್ಕೆ ದಾರಿ ಮಾಡಿಕೊಡುತ್ತದೆ.
ನಟ ವಿಶ್ವಕ್ ಸೇನ್- ನೇಹಾ ಶೆಟ್ಟಿ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಇಬ್ಬರು ಮಿತಿ ಮೀರಿ ನಡೆದುಕೊಂಡಿದ್ದಾರೆ. ಈ ಸಿನಿಮಾದ ಮೊದಲ ಹಾಡು ಸುತ್ತಮ್ಲ ಸುಸಿ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಹಾಡಿಗೆ ಯುವನ್ ಶಂಕರ್ ರಾಜಾ ಮ್ಯೂಸಿಕ್ ನೀಡಿದ್ದಾರೆ. ನಿನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿದೆ.
ಸಿನಿಮಾದ ಹಾಡಿನ ಹುಕ್ ಸ್ಟೆಪ್ಸ್ ಸಹ ಇದೆ. ಇದಕ್ಕೆ ನೇಹಾ ಮತ್ತು ವಿಶ್ವಕ್ ವೇದಿಕೆ ಮೇಲೆಯೇ ಹೆಜ್ಜೆ ಹಾಕಿದರು. ಈ ವೇಳೆ ನೇಹಾ ತಮ್ಮ ಸೀರೆಯ ಒಂದು ಎಳೆಯನ್ನು ಬಿಚ್ಚಿ ಹೀರೋ ವಿಶ್ವಕ್ ಮೇಲೆ ಹಾಕಿ ಹುಕ್ ಸ್ಟೆಪ್ಸ್ ಮಾಡಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ವೇದಿಕೆ ಮೇಲೆ ಈ ರೀತಿ ನಡೆದುಕೊಳ್ಳಬಾರದು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮನ್ನ ಫಾಲೋ ಮಾಡೋ ಅನೇಕ ಅಭಿಮಾನಿಗಳಿರುತ್ತಾರೆ. ನೀವೇ ಹೀಗೆ ಮಾಡಿದ್ರೆ ಹೇಗೆ ಎಂದು ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

Leave a Reply

error: Content is protected !!