
ಸಹ್ಯಾದ್ರಿ ಫ್ರೆಂಡ್ಸ್ ಕ್ಲಬ್ ರಿಜಿಸ್ಟರ್ ಕೈಕಾರ ಇದರ ವತಿಯಿಂದ ಆಟಿಡೊಂಜಿ ದಿನ ಕೆಸರಡೊಂಜಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಪುತ್ತೂರಿನ ಕೈಕಾರ ದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯೋಗಾಸನದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆರಾಧ್ಯ ಎ ರೈ ರವರಿಗೆ ಸಹ್ಯಾದ್ರಿ ಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹರೇಕಳ ಹಾಜಪ್ಪ, ಮಹಾಲಿಂಗ ನಾಯ್ಕ ಮತ್ತು ತುತ್ತೂರಿನ ಪ್ರಜ್ಞ ಆಶ್ರಮದ ವಿಶೇಷ ಚೇತನರ ಪಾಲಕರಾದ ಅಣ್ಣಪ್ಪ ವಿ ಎಮ್ ಮತ್ತು ಕಲಾಕ್ಷೇತ್ರದ ದೀಪಕ್ ರೈ ಪಾಣಾಜೆ ರವರಿಗೆ ಸಹ್ಯಾದ್ರಿ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕು.ಆರಾಧ್ಯ ಎ ರೈ ರವರು ಪುತ್ತೂರಿನ ಕೈಕಾರ ನಿವಾಸಿ ಉದ್ಯಮಿ ತೊಟ್ಲ ಅವಿನಾಶ್ ರೈ ಮತ್ತು ಇಚಿಲಂಪಾಯ ನಿವಾಸಿ ನೆಲ್ಯಾಡಿಯ ಆರಾಧ್ಯ ಬ್ಯೂಟಿ ಪಾರ್ಲರ್ ನ ಮಾಲಕಿ ಶ್ರೀಮತಿ ಸಂಧ್ಯಾ ಅವಿನಾಶ್ ರೈ ದಂಪತಿಗಳ ಸುಪುತ್ರಿ ಯಾಗಿದ್ದಾರೆ



