ITI ಪಾಸಾದವರಿಗೆ ಬೆಂಗಳೂರು HAL ಕಚೇರಿನಲ್ಲಿ 1060 ಹುದ್ದೆಗೆ ನೇಮಕ

ಶೇರ್ ಮಾಡಿ

ಕೇಂದ್ರ ರಕ್ಷಣಾ ಸಚಿವಾಲಯ ಅಧೀನದ ಪಬ್ಲಿಕ್ ಸೆಕ್ಟಾರ್ ನವರತ್ನ ಕಂಪನಿ ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ ನ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ನಲ್ಲಿ ಅಗತ್ಯ ಇರುವ ಅಪ್ರೆಂಟಿಸ್ ಟ್ರೈನಿಗಳನ್ನು ನೇಮಕ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಅಪ್ರೆಂಟಿಸ್ ಕಾಯ್ದೆ 1961 ರ ನಿಯಮಗಳ ಪ್ರಕಾರ ನಿಯೋಜಿಸಿಕೊಳ್ಳಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿರಿ.

ನೇಮಕಾತಿ ಪ್ರಾಧಿಕಾರ : ಹಿಂದುಸ್ತಾನ್ ಏರೋನಾಟಿಕ್ ಲಿಮಿಟೆಡ್
ಉದ್ಯೋಗ ಸ್ಥಳ : ಬೆಂಗಳೂರು ಹೆಚ್‌ಎಎಲ್‌ ಕೇಂದ್ರ.
ಅಪ್ರೆಂಟಿಸ್ ಟ್ರೈನಿಗಳ ಸಂಖ್ಯೆ : 1060

ವಿದ್ಯಾರ್ಹತೆ
ಫಿಟ್ಟರ್ / ಟರ್ನರ್ / ಮಷಿನಿಸ್ಟ್ / ಇಲೆಕ್ಟ್ರೀಷಿಯನ್ / ವೆಲ್ಡರ್ / ಕೊಪಾ / ಫೌಂಡ್ರಿ ಮ್ಯಾನ್ / ಶೀಟ್‌ ಮೆಟಲ್ ವರ್ಕರ್ ಟ್ರೇಡ್‌ ಗಳಲ್ಲಿ ಐಟಿಐ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕನಿಷ್ಠ 14 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ.

ಅರ್ಜಿ ಸಲ್ಲಿಸುವ ವಿಧಾನ
– ಅರ್ಹ ಮತ್ತು ಆಸಕ್ತರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ
– ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌, ಹೆಚ್‌ಎಎಲ್‌, ಬೆಂಗಳೂರು ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
www.hal-india.co.in / www.apprenticeshipindia.org/candidate-registration ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶೇಕಡ.70 ಅಂಕಗಳನ್ನು ಮತ್ತು ಐಟಿಐ ಟ್ರೇಡ್‌ನ ಶೇಕಡ.30 ಅಂಕಗಳನ್ನು ಪರಿಗಣಿಸಿ, ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-08-2023

ಈಗಾಗಲೇ ಯಾವುದೇ ಅಪ್ರೆಂಟಿಸ್‌ ತರಬೇತಿ ಪಡೆದವರು ಹಾಗೂ ಒಂದು ವರ್ಷದ ಕಾರ್ಯಾನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸಿ ಶಾರ್ಟ್‌ ಲಿಸ್ಟ್‌ ಆದವರ ಹೆಸರನ್ನು ಹೆಚ್‌ಎಎಲ್‌ ವೆಬ್‌ಸೈಟ್‌ / ಎಸ್‌ಎಂಎಸ್‌ ಅಲರ್ಟ್‌ / ಇ-ಮೇಲ್‌ / ಫೋನ್‌ ಕರೆ ಮೂಲಕ ತಿಳಿಸಲಾಗುವುದು.

ತಾತ್ಕಾಲಿಕವಾಗಿ ಆಯ್ಕೆಯಾದವರು ಟಿಟಿಐ, ಹೆಚ್‌ಎಎಲ್‌, ಬೆಂಗಳೂರು ಇಲ್ಲಿಗೆ ಭೇಟಿ ನೀಡಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಆಯ್ಕೆಯಾದವರಿಗೆ ಮಾಸಿಕ ಸ್ಟೈಫಂಡ್‌ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್‌, ಮೀಸಲಾತಿ ಕೋರಿದಲ್ಲಿ ಅಗತ್ಯ ದಾಖಲೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಪಾಸ್ ಸರ್ಟಿಫಿಕೇಟ್‌, ಇತರೆ ದಾಖಲೆಗಳು, ವೈಯಕ್ತಿಕ ವಿವರಗಳು ಅಗತ್ಯವಾಗಿ ಬೇಕು.

Leave a Reply

error: Content is protected !!