ಮೊಗ್ರು ಮತ್ತು ಬಂದಾರು ಗ್ರಾಮದ ಗೌಡ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ, ಧರ್ಮಸ್ಥಳ ಪಾಂಗಳ ನಿವಾಸಿ ಸೌಜನ್ಯ ಹತ್ಯೆಯ ಪ್ರಕರಣವನ್ನು ಮರುತನಿಖೆ ಮಾಡುವಂತೆ ಸರಕಾರವನ್ನು ಒತ್ತಾಯಿಸಲು ಮನವಿ ಪತ್ರವನ್ನು ಇಂದು ಬಂದಾರು ಗ್ರಾಮ ಪಂಚಾಯಿತ್ ನಲ್ಲಿ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಸಲ್ಲಿಸಲಾಯಿತು.
ಮೊದಲು ಮೊಗ್ರು ಗ್ರಾಮದ ದೈವಸ್ಥಾನವಾದ ಕಾರಣಿಕ ದೈವ ಕ್ಷೇತ್ರ ಮುಗೇರಡ್ಕ ದೈವಸ್ಥಾನದಲ್ಲಿ, ಪೆಲತ್ತಿಮರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮತ್ತು ಗ್ರಾಮ ದೈವಸ್ಥಾನವಾದ ಪಾಣೆಕಲ್ಲು ಶಿರಾಡಿ ದೈವಸ್ಥಾನದಲ್ಲಿ ಬಂದಾರು ಮೊಗ್ರು ಗ್ರಾಮದ ಗೌಡ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸರ್ವಸದಸ್ಯರ ಸಮ್ಮುಖದಲ್ಲಿ ನಡೆಯಲ್ಲಿ ನಿಜವಾದ ಆರೋಪಿಗಳ ಶೀಘ್ರ ಪತ್ತೆಗೆ ಮತ್ತು ಅವರಿಗೆ ಕಠಿಣ ಶಿಕ್ಷೆ ಕಾನೂನು ನೀಡಲು ವಿಫಲ ಆದರೂ ದೈವಗಳು ಆದರೂ ತಕ್ಕ ಶಿಕ್ಷೆ ನೀಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಬಂದಾರು ಗ್ರಾಮ ಪಂಚಾಯತ್ ಗೆ ತೆರಳಿ ಸಂಬಂಧಪಟ್ಟ ಅಧಿಕಾರಿ ವರ್ಗದ ಮೂಲಕ ಸರಕಾರಕ್ಕೆ ಈ ಹತ್ಯೆ ಪ್ರಕರಣವನ್ನು ಮರುತನಿಖೆ ಮಾಡಿ ನೈಜ ಆರೋಪಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಿ ಇವಾಗ ಹಿಂದೂ ಸಮಾಜದಲ್ಲಿ ಇರುವ ಗೊಂದಲ ನಿವಾರಣೆ ಮಾಡಿ ಶಾಂತಿಯುತ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ವಿನಂತಿ ಮಾಡಲಾಯಿತು







