ಚೂರಿ ಇರಿದು ಯುವತಿಯ ಬರ್ಬರ ಹತ್ಯೆ: ಆರೋಪಿ ಬಂಧನ

ಶೇರ್ ಮಾಡಿ

ಪುತ್ತೂರು: ಯುವತಿಯೊಬ್ಬಳನ್ನು ಹಾಡಹಗಲೇ ಚೂರಿ ಇರಿದು ಹತ್ಯೆಗೈದ ಬೆಚ್ಚಿ ಬೀಳುವ ಘಟನೆ ನಗರದ ಮಹಿಳಾ ಪೊಲೀಸ್ ಸ್ಟೇಷನ್ ಬಳಿ ಗುರುವಾರ ಮಧ್ಯಾಹ್ನ(ಆ.24) ಸಂಭವಿಸಿದೆ.

ಹತ್ಯೆಗೀಡಾದ ಯುವತಿ ವಿಟ್ಲದ ಅಳಿಕಯ ಗೌರಿ(20) ಎಂದು ತಿಳಿದು ಬಂದಿದೆ. ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಗೌರಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ಆರೋಪಿ ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ ಪದ್ಮರಾಜ್ ನನ್ನ ಬಂಟ್ವಾಳದ ಮಾವಿನಕಟ್ಟೆ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನವ ಮಾಹಿತಿ ಲಭ್ಯವಾಗಿದೆ. ಈತ ಜೆಸಿಬಿ ಆಪರೇಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪುತ್ತೂರು ಪೇಟೆಗೆ ಬಂದಿದ್ದ ಯುವತಿ ಪುತ್ತೂರಿನ ಮಹಿಳಾ ಪೊಲೀಸ್ ಸ್ಟೇಷನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಏಕಾಏಕಿ ಬಂದ ಪದ್ಮರಾಜ್ ಚೂರಿಯಿಂದ ಇರಿದು ಪರಾರಿಯಾಗಿದ್ದ. ಯುವತಿಯನ್ನು ಪೊಲೀಸರು ಆಸ್ಪತ್ರೆಗೆಂದು ಕರೆದೊಯ್ದಿದ್ದರು. ಯುವತಿ ಸರಕಾರಿ ಬಸ್‌ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Leave a Reply

error: Content is protected !!