ನಿಖಿಲ್ ಕುಮಾರ್ ಚಿತ್ರಕ್ಕೆ ಆಯ್ಕೆಯಾದ ಹಿರೋಯಿನ್ ಎಲ್ಲಿಯವರು?

ಶೇರ್ ಮಾಡಿ

ನಿಖಿಲ್ ಕುಮಾರ್ ಸ್ವಾಮಿ ನಟನೆಯ ಹೊಸ ಸಿನಿಮಾದ ಮೂಲಕ ಬಾಲಿವುಡ್ ನಟಿ ಯುಕ್ತಿ ತಾರೇಜ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಇದು ಇವರ ದಕ್ಷಿಣದ ಎರಡನೇ ಚಿತ್ರವಾದರೆ, ಕನ್ನಡದಲ್ಲಿ ಮೊದಲು. ನಟ ನಾಗಶೌರ್ಯ ಜೊತೆ ರಂಗಾಬಲಿ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟವರು ಯುಕ್ತಿ ತಾರೇಜ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಹುಡುಗಿಯನ್ನು ಟಾಲಿವುಡ್ ಗೆ ಕರೆತರಲಾಗಿತ್ತು.
ಯುಕ್ತಿ ತಾರೇಜ ಮೂಲತಃ ಹರಿಯಾಣ ಮೂಲದವರು. ದೆಹಲಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿಕೊಂಡಿದ್ದಾರೆ. ಕೋವಿಡ್ ವೇಳೆಯಲ್ಲಿ ಮತ್ತೆ ಹರಿಯಾಣಕ್ಕೆ ಪ್ರಯಾಣ ಬೆಳೆಸಿದ್ದರು.
ಕಾಲೇಜು ದಿನಗಳಲ್ಲೇ ಫ್ಯಾಷನ್ ಜಗತ್ತಿನತ್ತ ಮುಖ ಮಾಡಿ, ಓದುತ್ತಿರುವಾಗಲೇ ‘ದೆಹಲಿ ಫ್ರೆಶ್ ಫೇಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೇ ಮಾಡೆಲಿಂಗ್ ಜಗತ್ತಿಗೆ ಬರಲು ಪ್ರೇರಣೆ ಅಂತಾರೆ. ದೆಹಲಿಯಲ್ಲೇ ಮಾಡೆಲಿಂಗ್ ಜಗತ್ತಿನಲ್ಲಿ ಹೆಸರು ಮಾಡುತ್ತಿರುವಾಗಲೇ ಸಿನಿಮಾ ರಂಗದತ್ತ ಒಲವು. ಮಾಡೆಲಿಂಗ್ ಮಾಡುವಾಗಲೇ ಚಿತ್ರದಲ್ಲಿ ನಟಿಸುವಂತೆ ಆಫರ್. ಹಾಗಾಗಿ ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ದಾರೆ.
ಬಾಲಿವುಡ್ ನಲ್ಲಿ ‘ಲುಟ್ ಗಯೆ’ ಹಾಡಿನ ಮೂಲಕ ಸಖತ್ ಫೇಮಸ್. ಆ ಹಾಡಿನ ಮೂಲಕ ಬಾಲಿವುಡ್ ಗೆ ಪರಿಚಯವಾದ ನಟಿ. ಈ ಹಾಡು ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚು ಕಡಿಮೆ ಮಾಡಿತ್ತು. ಲುಟ್ ಗಯೆ ಹಾಡಿನ ನಂತರ ಬಾಲಿವುಡ್ ನಲ್ಲಿ ಸಾಕಷ್ಟು ಆಫರ್ ಬಂದರೂ, ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕಿದರು. ಹಾಗಾಗಿ ರಂಗಬಲಿ ಇವರ ಚೊಚ್ಚಲು ಸಿನಿಮಾವಾಯಿತು.
ರಂಗಬಲಿ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದರು ಯುಕ್ತಿ ತಾರೇಜ. ಮೊದಲ ಸಿನಿಮಾದಲ್ಲೇ ಅಷ್ಟೊಂದು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಚರ್ಚೆಗೂ ಕಾರಣವಾಗಿತ್ತು. ಇದೀಗ ಕನ್ನಡ ಸಿನಿಮಾ ರಂಗಕ್ಕೂ ಯುಕ್ತಿ ತಾರೇಜ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಯಾವ ರೀತಿಯ ಪಾತ್ರ ಮಾಡುತ್ತಾರೆ ಎನ್ನುವುದು ಬಹಿರಂಗವಾಗಿಲ್ಲ. ಮುಂದಿನ ದಿನಗಳಲ್ಲಿ ತಿಳಿಯಬಹುದು.
ಈ ಸಿನಿಮಾದ ಮೂಲಕ ಲೈಕಾ ಸಂಸ್ಥೆ ಕೂಡ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಯುಕ್ತಿ ತಾರೇಜ ಆಯ್ಕೆ ಕೂಡ ಕುತೂಹಲ ಮೂಡಿಸಿದೆ.
ಮೊನ್ನೆಯಷ್ಟೇ ಯುಕ್ತಿ ತಾರೇಜ ಮತ್ತು ನಿಖಿಲ್ ಕಾಂಬಿನೇಷನ್ ಚಿತ್ರಕ್ಕೆ ಮುಹೂರ್ತವಾಗಿದೆ. ಮಾಜಿ ಸಿಎಂ ಕುಮಾರ ಸ್ವಾಮಿ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

Leave a Reply

error: Content is protected !!