ಕಡಬ: ಚಂದ್ರಯಾನಕ್ಕೆ ಕರ್ನಾಟಕ ಹೈಬ್ರಿಡ್ ಮೈಕ್ರೋ ಡಿವೈಸಸ್(KHMD) ಕಂಪೆನಿಯೂ ಇಸ್ರೋ ಜೊತೆಗೆ ಕೈ ಜೋಡಿಸಿದೆ. ಇಲ್ಲಿ ತಯಾರಾದ ಹೈಬ್ರಿಡ್ ಮೈಕ್ರೋಎಲೆಕ್ಟ್ರೋನಿಕ್ಸ್ ಉಪಕರಣಗಳನ್ನು ಇಸ್ರೋದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯಲ್ಲಿ ಬಳಸಲಾಗಿದೆ.
ಕರ್ನಾಟಕ ಹೈಬ್ರಿಡ್ ಮೈಕ್ರೋ ಡಿವೈಸಸ್ ಕಂಪೆನಿ ಹೈಬ್ರಿಡ್ ಮೈಕ್ರೋ ಸಕ್ರ್ಯೂಟ್ ಪ್ಯಾಕೇಜ್ ಅನ್ನು ಪರಿಶೋಧಿಸುತ್ತದೆ.
ಈ ತಂಡದಲ್ಲಿ ಕೆಲಸ ಮಾಡಿದವರಲ್ಲಿ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಎನ್ಕಾಜೆ ನಾರಾಯಣ ಗೌಡ ಮತ್ತು ಸುಶೀಲ ರ ಪುತ್ರ ಲೋಹಿತ್ ಒಬ್ಬರು.
ಲೋಹಿತ್ ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜಿನ 2009ರ ಪಿಯುಸಿ ಬ್ಯಾಚ್ ನ ವಿದ್ಯಾರ್ಥಿ