ಕೇಂದ್ರ ರೈಲ್ವೆಯಲ್ಲಿ 2409 ಹುದ್ದೆ ನೇಮಕ: ಯಾವುದೇ ಪರೀಕ್ಷೆ ಇರುವುದಿಲ್ಲ., ಇಂದಿನಿಂದಲೇ ಅರ್ಜಿ ಹಾಕಿ.

ಶೇರ್ ಮಾಡಿ

ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಓದಿರುವವರಿಗೆ ಭರ್ಜರಿ ಜಾಬ್ ಆಫರ್‌. ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ ವಲಯವು 2409 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 28 ರವರೆಗೆ ಅವಕಾಶ ನೀಡಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

1961 ರ ಅಪ್ರೆಂಟಿಸ್ ಆಕ್ಟ್‌ ಅಡಿಯಲ್ಲಿ ಕೇಂದ್ರ ರೈಲ್ವೆಯ ವಿವಿಧ ಜೋನ್‌ಗಳಲ್ಲಿ ಅಗತ್ಯ ತರಬೇತುದಾರರನ್ನು ನೇಮಕ ಮಾಡಲು ರೈಲ್ವೆ ನೇಮಕಾತಿ ಮಂಡಳಿ ಜಾಬ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಒಟ್ಟು 2409 ಹುದ್ದೆಗಳಿದ್ದು, ಯಾವ್ಯಾವ ಜೋನ್‌ಗಳಲ್ಲಿ ಎಷ್ಟು ಅಪ್ರೆಂಟಿಸ್‌ ಪೋಸ್ಟ್‌ಗಳಿವೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಆಸಕ್ತರು ಹುದ್ದೆಗಳ ಕುರಿತು ಕಂಪ್ಲೀಟ್ ಡೀಟೇಲ್ಸ್‌ ಅನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಬಹುದು.

ಸೆಂಟ್ರಲ್‌ ರೈಲ್ವೆಯ ಜೋನ್‌ವಾರು ಅಪ್ರೆಂಟಿಸ್‌ ಹುದ್ದೆಗಳ ವಿವರ

ಮುಂಬೈ ಕ್ಲಸ್ಟರ್ 1649
ಭುಸವಲ್ ಕ್ಲಸ್ಟರ್ 296
ಪುಣೆ ಕ್ಲಸ್ಟರ್ 152
ನಾಗ್ಪುರ್ ಕ್ಲಸ್ಟರ್ 114
ಸೋಲಾಪುರ್ ಕ್ಲಸ್ಟರ್ 76
ಶೈಕ್ಷಣಿಕ ಅರ್ಹತೆಗಳು

ಎಸ್‌ಎಸ್‌ಎಲ್‌ಸಿ ಜತೆಗೆ ವಿವಿಧ ಟ್ರೇಡ್‌ಗಳಲ್ಲಿ ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಅರ್ಹತೆ: ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರ ಆರಂಭ ದಿನಾಂಕ : 29-08-2023
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 28-09-2023 ರ ಸಂಜೆ 05 ಗಂಟೆವರೆಗೆ.
ಆಯ್ಕೆ ವಿಧಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶೇಕಡ.50 ಅಂಕಗಳು ಹಾಗೂ ಐಟಿಐ ಅಂಕಗಳನ್ನು ಸೇರಿಸಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಲಾಗುತ್ತದೆ. ನಂತರ ಶಾರ್ಟ್‌ ಲಿಸ್ಟ್‌ ಆದವರಿಗೆ ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗೆ ನಿಯೋಜಿಸಲಾಗುತ್ತದೆ. ಇವರಿಗೆ ಮಾಸಿಕ ಸ್ಟೈಫಂಡ್‌ ಅನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಸೆಂಟ್ರಲ್‌ ರೈಲ್ವೆಯ ನೇಮಕಾತಿ ಪ್ರಕ್ರಿಯೆ ವೆಬ್‌ಪುಟ ಕ್ಕೆ ಭೇಟಿ ನೀಡಿ.
ಓಪನ್‌ ಆದ ಪೇಜ್‌ನಲ್ಲಿ ‘Click Here To Register’ ಎಂದಿರುವಲ್ಲಿ ಕ್ಲಿಕ್ ಮಾಡಿ.
ತೆರೆದ ವೆಬ್‌ಪುಟದಲ್ಲಿ ವೈಯಕ್ತಿಕ ಮಾಹಿತಿಗಳನ್ನು ನೀಡಿ ರಿಜಿಸ್ಟರ್ ಪಡೆಯಿರಿ.
ರಿಜಿಸ್ಟ್ರೇಷನ್‌ ಐಡಿ ಹಾಗೂ ಪಾಸ್‌ವರ್ಡ್‌ ಜೆನೆರೇಟ್‌ ಆದ ನಂತರ ಮತ್ತೆ ಲಾಗಿನ್‌ ಆಗಿ.
ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಅಪ್ಲಿಕೇಶನ್‌ ಶುಲ್ಕ ರೂ.100.
ಮಾಸಿಕ ಸ್ಟೈಫಂಡ್ : Rs.7000
ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ https://www.rrccr.com/Home/Home

Leave a Reply

error: Content is protected !!