ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್‌ನಲ್ಲಿ 123 ಹುದ್ದೆ ನೇಮಕ: ಕ್ಲರ್ಕ್‌, ಕಂಪ್ಯೂಟರ್ ಪ್ರೊಗ್ರಾಮರ್‌ಗಳಿಗೆ ಅರ್ಜಿ ಆಹ್ವಾನ

ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಲ್ಲಿ ದ್ವಿತೀಯ ದರ್ಜೆ ಕ್ಲರ್ಕ್‌ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರು ಅರ್ಜಿ ಹಾಕಿರಿ. ಒಟ್ಟು 125 ಹುದ್ದೆಗಳಿವೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಲ್ಲಿ ಪ್ರಸ್ತುತ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಹತೆ, ಆಯ್ಕೆ ವಿಧಾನ, ಶುಲ್ಕ ಮಾಹಿತಿ, ವಯಸ್ಸಿನ ಅರ್ಹತೆಗಳನ್ನು ಈ ಕೆಳಗಿನಂತೆ ಚೆಕ್‌ ಮಾಡಿಕೊಳ್ಳಿ.

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಕಂಪ್ಯೂಟರ್ ಪ್ರೋಗ್ರಾಮರ್ 2
ದ್ವಿತೀಯ ದರ್ಜೆ ಕ್ಲರ್ಕ್‌ 123
ಹುದ್ದೆವಾರು ವೇತನ ಶ್ರೇಣಿ

ಕಂಪ್ಯೂಟರ್ ಪ್ರೋಗ್ರಾಮರ್ : Rs.36985-89,600.
ದ್ವಿತೀಯ ದರ್ಜೆ ಕ್ಲರ್ಕ್‌ : Rs.24910-55,655.

ವಿದ್ಯಾರ್ಹತೆ ಹಾಗೂ ಆಯ್ಕೆ ವಿಧಾನ
ಕಂಪ್ಯೂಟರ್‌ ಪ್ರೋಗ್ರಾಮರ್ – ಎಂಸಿಎ ಅಥವಾ ಬಿಇ ಇನ್‌ ಕಂಪ್ಯೂಟರ್ ಸೈನ್ಸ್‌ ಅಥವಾ ಎಂಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್‌ ಪಾಸ್. ಜತೆಗೆ ಕನಿಷ್ಠ 3 ವರ್ಷ ಸೇವಾನುಭವ ಹೊಂದಿರಬೇಕು. ಈ ಹುದ್ದೆಗಳಿಗೆ 200 ಅಂಕಗಳಿಗೆ ಕನ್ನಡ ಭಾಷೆ, ಜೆನೆರಲ್ ಇಂಗ್ಲಿಷ್, ಕಂಪ್ಯೂಟರ್ ಅರಿವು ಕುರಿತು ಪ್ರಶ್ನೆಗಳ ಪರೀಕ್ಷೆ ಇರುತ್ತದೆ.

ದ್ವಿತೀಯ ದರ್ಜೆ ಕ್ಲರ್ಕ್ – ಯಾವುದೇ ಪದವಿ / ಸ್ನಾತಕೋತ್ತರ ಪದವಿ ಜತೆಗೆ ಕನಿಷ್ಠ 6 ತಿಂಗಳ ಕಂಪ್ಯೂಟರ್‌ ಕೋರ್ಸ್‌ ಪ್ರಮಾಣ ಪತ್ರ ಹೊಂದಿರಬೇಕು. ಈ ಹುದ್ದೆಗಳಿಗೆ ಸಹ 200 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಕನ್ನಡ ಭಾಷೆ, ಜೆನೆರಲ್ ಇಂಗ್ಲಿಷ್, ಕಂಪ್ಯೂಟರ್ ಅರಿವು, ಸಹಕಾರಿ ವಿಷಯಗಳು, ಭಾರತ ಸಂವಿಧಾನ, ಸಮಾಜಿಕ ನಡಾವಳಿಗಳ ಕುರಿತು ಪ್ರಶ್ನೆಗಳು ಇರುತ್ತವೆ.

ವಯಸ್ಸಿನ ಅರ್ಹತೆಗಳು
ದಿನಾಂಕ 20-09-2023 ಕ್ಕೆ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.

ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ಅಭ್ಯರ್ಥಿಗಳಿಗೆ Rs.1000.
ಒಬಿಸಿ ಅಭ್ಯರ್ಥಿಗಳಿಗೆ Rs.1000.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ Rs.500.

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 20-09-2023

ಅರ್ಜಿ ಸಲ್ಲಿಸುವ ವಿಧಾನ

  • ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನೇಮಕಾತಿ ವೆಬ್‌ಸೈಟ್‌ ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ ಸ್ಕ್ರಾಲ್‌ ಡೌನ್‌ ಮಾಡಿ.
  • ಅರ್ಜಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಕೇಳಲಾಗಿರುತ್ತದೆ. ಸೂಕ್ತವಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.
    ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೇಮಕಾತಿ ಅಧಿಸೂಚನೆ ಕ್ಲಿಕ್ ಮಾಡಿ ಓದಿರಿ.

SCDCC Bank Recruitment 2023 Notification

Leave a Reply

error: Content is protected !!