ಶುಭ ಸಮಾರಂಭಗಳು ಸಮಾಜಕ್ಕೆ ಸಂತಸವನ್ನು ನೀಡಬೇಕೆ ಹೊರತು ಸಮಾಜದ ಯುವ ಜನಾಂಗವು ಮಾದಕ ವ್ಯಸನಕ್ಕೆ ಬಲಿಯಾಗಲು ವೇದಿಕೆಯಾಗಬಾರದು. ಮದ್ಯ, ತಂಬಾಕಿನ ಸೇವನೆಯಿಂದ ಇಂದು ಯುವ ಜನಾಂಗವು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಖೇದಕರ ಎಂದು ನಿವೃತ್ತ ಮಲೇರಿಯಾ ಪರಿವೀಕ್ಷಣಾಧಿಕಾರಿ ಜಯರಾಮ ಪೂಜಾರಿ ಯವರು ಹೇಳಿದರು.
ಅವರು ಜೇಸಿಐ ಜೋಡುಮಾರ್ಗ ನೇತ್ರಾವತಿ ಹಾಗು ರೋಟರಿ ಕ್ಲಬ್ ಬಂಟ್ವಾಳ ಟೌನ್ ಆಶ್ರಯದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಾದಕ ವ್ಯಸನದ ಬಗೆಗಿನ ಜಾಗೃತಿ ಶಿಬಿರದಲ್ಲಿ ಮಾದಕ ವ್ಯಸನಗಳಿಂದಾಗುವ ಅನಾಹುತಗಳ ಬಗ್ಗೆ ತಿಳಿಸಿದರು.
ಶಾಲಾ ಮುಖ್ಯಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಸುರೇಶ್ ಸಾಲ್ಯಾನ್, ಜೇಸಿಐ ಅಧ್ಯಕ್ಷೆ JFD.ಗಾಯತ್ರಿ ಲೋಕೇಶ್, ನಿಕಟ ಪೂರ್ವಾಧ್ಯಕ್ಷ ಹಾಗು ಶಿಕ್ಷಕರಾದ ಹರಿಪ್ರಸಾದ್ ಕುಲಾಲ್, ಜೇಜೇಸಿ ಅಧ್ಯಕ್ಷೆ ರಶ್ಮಿತಾ, ಶಾಲಾ ವಿದ್ಯಾರ್ಥಿ ನಾಯಕಿ ಸಾನ್ವಿ, ಶಾಲಾ ಶಿಕ್ಷಕರು ಹಾಗು ರೋಟರಿ ಸದಸ್ಯರು ಉಪಸ್ಥಿತರಿದ್ದರು