ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು-ದಕ್ಷಿಣ ಮತ್ತು ಸಂತ ವಿಕ್ಟೋರಿಯಾ ಪ್ರೌಢ ಶಾಲೆ, ಲೇಡಿಹಿಲ್, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯು ಮಂಗಳ ಸ್ಟೇಡಿಯಂ, ಮಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವೇದ್‍ವೃತ್ ಭಂಡಾರಿ, 10ನೇ ತರಗತಿ(ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಭಂಡಾರಿ ದಂಪತಿ ಪುತ್ರ)- ತೃತೀಯ ಸ್ಥಾನ, ಗಂಗೂಲ್ ನಾೖಕ್‍,10ನೇ ತರಗತಿ(ಶ್ರೀ ಸಂದೀಪ್ ನಾೖಕ್‍ ಮತ್ತು ಡಾ.ನಮಿತಾ ನಾೖಕ್‍ ದಂಪತಿ ಪುತ್ರ)- ತೃತೀಯ ಸ್ಥಾನ, ಅಧಿನ್ ರೈ.ಬಿ, 10ನೇ ತರಗತಿ (ಬುಡಿಯಾರ್.ಪುರುಷೋತ್ತಮ ರೈ ಮತ್ತು ರೂಪ.ಪಿ.ರೈ ದಂಪತಿ ಪುತ್ರ)- ತೃತೀಯ ಸ್ಥಾನ, ರಾಮ್‍ಪ್ರಸಾದ್, 10ನೇ ತರಗತಿ(ಬಾಲಕೃಷ್ಣ ನಾಯಕ್ ಮತ್ತು ದಿವ್ಯಜ್ಯೋತಿ ದಂಪತಿ ಪುತ್ರ)- ತೃತೀಯ ಸ್ಥಾನ, ನಮನ್, 7ನೇ ತರಗತಿ (ಸಂದೀಪ್ ನಾೖಕ್‍ ಮತ್ತು ಡಾ.ನಮಿತಾ ನಾೖಕ್‍ ದಂಪತಿ ಪುತ್ರ) ಭಾಗವಹಿಸಿರುತ್ತಾನೆ.
ಜಿ.ಪ್ರತೀಕ್ಷಾ ಆಳ್ವ, 10ನೇ ತರಗತಿ(ಚಂದ್ರಶೇಖರ ಆಳ್ವ ಮತ್ತು ಉಷಾ ಆಳ್ವ ದಂಪತಿ ಪುತ್ರಿ)-ದ್ವಿತೀಯ, ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!