Bigg Boss Promo; ಈ ಬಾರಿ ‘ಸಮ್‌ಥಿಂಗ್‌ ಸ್ಪೆಷಲ್‌

ಶೇರ್ ಮಾಡಿ

ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ “ಬಿಗ್‌ಬಾಸ್‌- ಸೀಸನ್‌-10ರ ಪ್ರೋಮೋ ಬಿಡುಗಡೆಯಾಗಿದೆ.

ಸಾಮಾನ್ಯವಾಗಿ ಪ್ರೋಮೋ ನಲ್ಲಿ ಸುದೀಪ್‌ ಇರುತ್ತಾರೆ. ಆದರೆ, ಈ ಬಾರಿಯ ಪ್ರೋಮೋನಲ್ಲಿ ಸುದೀಪ್‌ ಅವರನ್ನು ತೋರಿಸಿಲ್ಲ. ಬದಲಾಗಿ ಬೇರೆ ರೀತಿಯೇ ಪ್ರೋಮೋ ಶೂಟ್‌ ಮಾಡಲಾಗಿದೆ.
ಸಾಮಾನ್ಯವಾಗಿ ಬಿಗ್‌ಬಾಸ್‌ ಮನೆಯ ಕ್ಯಾಮರಾಗಳನ್ನು ತೋರಿಸಿ ಪ್ರೋಮೋ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ರಸ್ತೆಯಲ್ಲಿನ ಕ್ಯಾಮರಾ, ಕಟ್ಟಡಗಳ ಮೇಲಿನ ಕ್ಯಾಮರಾದ ಜೊತೆಗೆ ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಪ್ರೋಮೋನಲ್ಲಿ ತೋರಿಸಲಾಗಿದ್ದು, ಸಮ್‌ಥಿಂಗ್‌ ಸ್ಪೆಷಲ್‌ ಎನ್ನಲಾಗಿದೆ.

ಸದ್ಯ ಪ್ರೋಮೋ ಕುತೂಹಲದ ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಾರಿ ಯಾರ್ಯಾರು ಸ್ಪರ್ಧಿಗಳಾಗುತ್ತಾರೆ ಎಂಬ ಕುತೂಹಲವೂ ಹುಟ್ಟಿಕೊಂಡಿದೆ. ಈ ಕುತೂಹಲಕ್ಕೆ ಉತ್ತರವಾಗಿ ಒಂದಷ್ಟು ಹೆಸರುಗಳು ಓಡಾಡುತ್ತಿವೆ.

ಕಿರುತೆರೆ ಧಾರಾವಾಹಿ ಮಂದಿಯಿಂದ ಹಿಡಿದು ಕಾಂಟ್ರಾವರ್ಸಿ ಮೂಲಕ ಅಥವಾ ತಮ್ಮ ಮಾತಿನ ಕೌಶಲ್ಯ ದಿಂದ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ ಅನೇಕರ ಹೆಸರುಗಳು ಈ ಬಾರಿಯೂ ಕೇಳಿಬರುತ್ತಿದೆ.

Leave a Reply

error: Content is protected !!