ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌: ಅರ್ಜಿ ಆಹ್ವಾನ

ಶೇರ್ ಮಾಡಿ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅರ್ಹ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಪೈಕಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ/ದ್ವಿತೀಯ ಪಿಯುಸಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುತ್ತಿದೆ.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ (ಮೆರಿಟ್ ಆಧಾರದ ಮೇಲೆ) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸರಿಸಮ ಅಂಕಗಳನ್ನು ಪಡೆದಾಗ ಫಲಾನುಭವಿಯ ನೊಂದಣಿ ಸದಸ್ಯತ್ವದ ಹಿರಿತನವನ್ನು ಆಯ್ಕೆಗೆ ಪರಿಗಣಿಸಲಾಗುವುದು. ಫಲಾನುಭವಿಯು ಮಂಡಳಿಯಲ್ಲಿ ಮಾರ್ಚ್ 2023ರ ಅಂತ್ಯಕ್ಕೂ ಮೊದಲು ನೋಂದಣಿ ಮಾಡಿಸಿಕೊಂಡಿರಬೇಕು. ಫಲಾನುಭವಿಯ ಒಂದು ಮಗುವಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುವುದು. ಸರಕಾರದ ಯಾವುದೇ ಯೋಜನೆಯಲ್ಲಿ ಈವರೆಗೆ ಲ್ಯಾಪ್‌ಟಾಪ್ ಪಡೆದಿರಬಾರದು. ಕಾರ್ಮಿಕ ಅಧಿಕಾರಿಯ ಕಚೇರಿ, ದ.ಕ. ಉಪ ವಿಭಾಗ-1 ಹಾಗೂ ದ.ಕ. ಉಪ ವಿಭಾಗ-2 ಮಂಗಳೂರು ಇವರ ಕಾರ್ಯವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಅರ್ಜಿ ನಮೂನೆಯನ್ನು ಹಿರಿಯ/ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಪಡೆದು ಅಗತ್ಯ ದಾಖಲೆಯೊಂದಿಗೆ ಸೆ.22ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಮಾಹಿತಿಗೆ ಕಾರ್ಮಿಕ ಅಧಿಕಾರಿಯ ಕಚೇರಿ, ದ.ಕ. ಉಪ ವಿಭಾಗ-1 ಮತ್ತು -2 ಮಂಗಳೂರು, 2 ಮತ್ತು 3ನೇ ಮಹಡಿ, ರ್ಕಾುಕ ಭವನ, ಶರಭತ್‌ಕಟ್ಟೆ, ಯೆಯ್ಯಾಡಿ, ಕೊಂಚಾಡಿ ಅಂಚೆ, ಮಂಗಳೂರು-575008 ಅಥವಾ ಸಂಬಂಧಪಟ್ಟ ಹಿರಿಯ/ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾರ್ಮಿಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!