ಸ್ಟೈಲೀಶ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟ ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಸಾನ್ಯ ಅಯ್ಯರ್

ಶೇರ್ ಮಾಡಿ

‘ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಸ್ಟೈಲೀಶ್ ಆಗಿ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ, ಈಗ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸಾನ್ಯ ಕಂಗೊಳಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಸಿನಿಮಾದಲ್ಲಿ ಸಾನ್ಯ ನಾಯಕಿಯಾಗಿದ್ದಾರೆ. ಸಮರ್ಜಿತ್‌ಗೆ ಜೋಡಿಯಾಗಿ ಸಾನ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸಾನ್ಯ ಅಯ್ಯರ್ ಸ್ಪಧಿಯಾಗಿ ಭಾಗವಹಿಸಿದ್ದರು. ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯ ಸ್ನೇಹ ಹೈಲೆಟ್ ಆಗಿತ್ತು. ಈ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಭಾಗವಹಿಸಿದ್ದರು.

‘ಪುಟ್ಟ ಗೌರಿ ಮದುವೆ’ ಸೀರಿಯಲ್ ಸೇರಿದಂತೆ ಹಲವು ಸಿನಿಮಾದಲ್ಲಿ ಸಾನ್ಯ ಬಾಲನಟಿಯಾಗಿ ನಟಿಸಿದ್ದರು. ಈಗ ನಾಯಕಿಯಾಗಿ ಮಿಂಚಲು ಪುಟ್ಟ ಗೌರಿ ರೆಡಿಯಾಗಿದ್ದಾರೆ.

Leave a Reply

error: Content is protected !!