ದೇವಸ್ಥಾನದಲ್ಲಿ ಹೃದಯಾಘಾತದಿಂದ ಬಿದ್ದು ನಿವೃತ್ತ ಅಧ್ಯಾಪಕ ಮೃತ್ಯು

ಶೇರ್ ಮಾಡಿ

ದೇವಸ್ಥಾನದಲ್ಲಿ ಹೃದಯಾಘಾತಕ್ಕೊಳಗಾಗಿ ಬಿದ್ದು ನಿವೃತ್ತ ಅಧ್ಯಾಪಕರೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತರನ್ನು ಪಡುಪಣಂಬೂರು ಬೆಳ್ಳಾಯರು ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣರಾವ್ (63) ಎಂದು ತಿಳಿದು ಬಂದಿದೆ.ಇವರು ಸುರತ್ಕಲ್ ನ ಶ್ರೀ ಮಹಾಲಿಂಗೇಶ್ವರ ದೇಶವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನಕ್ಕೆ ಬರುವ ಮೆಟ್ಟಿಲುಗಳನ್ನು ಇಳಿದು ಆವರಣದಲ್ಲಿ ಸ್ವಲ್ಪ ದೂರ ಕ್ರಮಿಸುತ್ತಲೇ ಹೃದಯಾಘಾತಕ್ಕೊಳಗಾಗಿ ಬಿದ್ದಿದ್ದಾರೆ. ದೇವಸಸ್ಥಾನದಲ್ಲಿದ್ದ ಇತರ ಭಕ್ತರು ಬಂದು ಅವರನ್ನು ನೋಡುತ್ತಿದ್ದಂತೆಯೇ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ದೇಸಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣರಾವ್ ಅವರು ಕಳೆದ ಹಲವಾರು ವರ್ಷಗಳಿಂದ ಪುನರೂರು ಭಾರತ್‌ ಮಾತಾ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬೆಳ್ಳಾಯರು ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದರು. ಬೆಳ್ಳಾಯರು ಗೋಂಟು ಪುತ್ರನ್ ಮೂಲಸ್ಥಾನದ ಸಹ ಅರ್ಚಕರಾಗಿ, ಕೆಂಚನಕೆರೆ ಹಾಲು ಉತ್ಪಾದಕರ ಸಂಘದ ಸದಸ್ಯರಾಗಿ, ಹೈನುಗಾರರಾಗಿ, ಕೃಷಿಕರಾಗಿ, ಉತ್ತಮ ಸಾಮಾಜಿಕ ಕಾರ್ಯಕರ್ತರಾಗಿ ಕೊಡುಗೈದಾನಿಯಾಗಿ ಜನಾನುರಾಗಿಯಾಗಿದ್ದರು.ಕೃಷ್ಣರಾವ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Leave a Reply

error: Content is protected !!