ಅಧ್ಯಕ್ಷರಾಗಿ ತೌಫೀಕ್ ಎಂ.ಕೆ, ಕಾರ್ಯದರ್ಶಿಯಾಗಿ ಶಮೀರ್ ಅರ್ಷದಿ
ನೆಲ್ಯಾಡಿ: ಕಡಬ ತಾಲ್ಲೂಕಿನ ಕೋಲ್ಪೆ ಬಿಷಾರ ಸಂಸ್ಥೆಯ ಪದಾಧಿಕಾರಿಗಳ ಸಭೆ ಹಿರಿಯರಾದ ಇಸ್ಮಾಯಿಲ್ ಸಾಹೇಬ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ತೌಫೀಕ್ ಎಂ.ಕೆ, ಕಾರ್ಯದರ್ಶಿಯಾಗಿ ಶಮೀರ್ ಅರ್ಷದಿ ಆಯ್ಕೆಯಾದರು.
ಕೋಲ್ಪೆಯ ಯುವ ವಾಗ್ಮಿ ಹಾರಿಸ್ ಕೌಸರಿ ಮುಖ್ಯ ಅತಿಥಿಯಾಗಿ ಆಗಮಿಸಿ ‘ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಂಡು ಸಂಘದಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳ ಮೂಲಕ ಬಡವರ ಪಾಲಿಗೆ ಆಶಾಕಿರಣವಾಗಬೇಕು ಮತ್ತು ಮಾದಕ ವ್ಯಸನದ ಬಗ್ಗೆ ಜನ ಜಾಗೃತಿ ಮೂಡಿಸಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷರಾಗಿ ಶಾಹಿನ್ ಶಾ, ಜೊತೆ ಕಾರ್ಯದರ್ಶಿಗಳಾಗಿ ಸಫ್ವಾನ್ ಹಾಗೂ ಉಮರುಲ್ ಫಾರೂಕ್ ಕೋಶಾಧಿಕಾರಿಯಾಗಿ ಇಕ್ಬಾಲ್ ಕೋಲ್ಪೆ ಆಯ್ಕೆಯಾದರು
ಶಿಕ್ಷಣ, ಮೆಡಿಕಲ್, ಕ್ರೀಡೆ ಹಾಗೂ ಮಾಧ್ಯಮ ಉಸ್ತುವಾರಿಗಳಾಗಿ ನವಾಝ್ ಶೇಕ್, ಇರ್ಫಾನ್, ಇಲ್ಯಾಸ್ ಹಾಗೂ ಮರ್ಝುಕ್ ರವರನ್ನು ಸಲಹೆಗಾರರಾದ ಫೈಝಲ್ ಶೇಕ್ ರವರ ಮಾರ್ಗದರ್ಶನದಂತೆ ನೇಮಿಸಲಾಯಿತು.
ವೇದಿಕೆಯಲ್ಲಿ ಜಾಬಿರ್ ಕೋಲ್ಪೆ ಹಾಗೂ ರಫೀಕ್ ಕೆ.ಎಂ ಉಪಸ್ಥಿತರಿದ್ದರು. ಗೌರವದ್ಯಕ್ಷರಾದ ರಫೀಕ್ ಸೂಚನೆಯಂತೆ ಹಲವು ಯೋಜನೆಗಳನ್ನು ರೂಪಿಸಲಾಯಿತು. ಊರಿನ ಬಡ ನಿರ್ಗತಿಕ ಸಹೋದರಿಯರ ಮದುವೆಗೆ ಸಹಾಯ ಮಾಡುವಂತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುವಂತೆ ಮನವಿ ಮಾಡಿಕೊಂಡರು. ಸಿನಾನ್ ಕೋಲ್ಪೆ ನಿರೂಪಿಸಿ, ಮರ್ಝುಕ್ ಧನ್ಯವಾದಗೈದರು.