ಬಿ.ಸಿ.ರೋಡು -ಅಡ್ಡಹೊಳೆ ಸುಸಜ್ಜಿತ ಹೆದ್ದಾರಿ 2023ರಲ್ಲಿ ಸಂಚಾರಕ್ಕೆ ಮುಕ್ತ

ಶೇರ್ ಮಾಡಿ

ಶಿರಾಡಿ: ಪರ್ಯಾಯ ಕ್ರಮಕ್ಕೆ ಸೂಚನೆ
ದ.ಕ. ಜಿಲ್ಲೆಯ ಶಿರಾಡಿ ಮೂಲಕ ಸಾಗುವ ಬೆಂಗಳೂರು ರಸ್ತೆಯು ಜಿಲ್ಲೆಯ ಆರ್ಥಿಕ ವ್ಯವಹಾರದ ಜೀವನಾಡಿಯಾಗಿರುವುದರಿಂದ ಈ ಹೆದ್ದಾರಿಯನ್ನು ದುರಸ್ತಿಗಾಗಿ 6 ತಿಂಗಳು ಬಂದ್‌ ಮಾಡುವ ಬದಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕಾಮಗಾರಿ ಮುಂದುವರಿಸುವಂತೆ ತಿಳಿಸಲಾಗಿದೆ.ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅದನ್ನು ವೀಕ್ಷಿಸಿ ಪರ್ಯಾಯ ವ್ಯವಸ್ಥೆಯ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು

ನೇಸರ ಜ.25:ಬಿ.ಸಿ.ರೋಡು -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಹಿಂದಿನ ವಿನ್ಯಾಸವನ್ನು ಪರಿವರ್ತನೆ ಮಾಡಿಕೊಂಡು ಹೊಸ ಟೆಂಡರ್‌ ಮೂಲಕ 2 ಕಂಪೆನಿಗಳಿಂದ ವೇಗವಾಗಿ ಕಾಮಗಾರಿ ಆರಂಭಗೊಂಡಿದ್ದು,2023ರಲ್ಲಿ ಸುಸಜ್ಜಿತ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳ್ಳುವ ವಿಶ್ವಾಸವಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.ಅವರು ಸೋಮವಾರ ಸಚಿವ ಎಸ್‌. ಅಂಗಾರ ಹಾಗೂ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಜತೆಗೆ ಬಿ.ಸಿ.ರೋಡಿನಿಂದ ಕಲ್ಲಡ್ಕವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲಿಸಿ ಬಳಿಕ ಮಾತನಾಡಿದರು.
ಹೆದ್ದಾರಿ ಕಾಮಗಾರಿ ಸಂದರ್ಭ ಕುಡಿಯುವ ನೀರು,ವಿದ್ಯುತ್‌ ಮೊದಲಾದ ಸಮಸ್ಯೆಗಳಾಗುವುದು ಸಹಜ.ಅದನ್ನು ನಿವಾರಿಸಿಕೊಂಡು ಕಾಮಗಾರಿ ವೇಗವಾಗಿ ಸಾಗುತ್ತದೆ. 15 ದಿನಗಳೊಗೊಮ್ಮೆ ಪ್ರಗತಿ ಪರಿಶೀಲನ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗುತ್ತದೆ. ಎಂದರು.

Leave a Reply

error: Content is protected !!